ಗುರುವಾರ, ಮಾರ್ಚ್ 17, 2011

ಹೊಯ್ಸಳರು

ಕಲ್ಯಾಣಿ ಚಾಲುಕ್ಯರು
ಪ್ರಸ್ತಾವನೆ
ಇವರು ರಾಷ್ಟ್ರಕೂಟರ ಆಳ್ವಿಕೆಯನ್ನು ಕೊಣೆಗಾಣಿಸಿ ಪ್ರವರ್ಧಮಾನಕ್ಕೆ ಬಂದರು
ಇವರನ್ನು ಪಶ್ಚಿಮದ ಚಾಲುಕ್ಯರೆಂದು ಕರೆಯುವರು
ಇವರ ಪ್ರಾರಂಭದ ರಾಜಧಾನಿ - ಏತಗಿರಿ ಅಥವಾ ಪೊಟ್ಟಳಕೆರೆ ಹಾಗೂ ಮಹಾರಾಷ್ಟ್ರದ ಮಾನ್ಯಖೇಟ
ಇವರ ಲಾಂಛನ - ವರಾಹ
ರಾಷ್ಟ್ರಕೂಟರ ಸಾಮಂತರಾಗಿದ್ದ ಎರನೇ ತೈಲಪ - ಈ ಮನೆತನದ ಮೂಲ ಪುರುಷ
ತೈಲಪ ಎರಡನೇ ಕರ್ಕನನ್ನ ಸೋಲಿಸಿ ಈ ರಜ್ಯಾಕ್ಕೆ ತಳಹದಿ ಹಾಕಿದನು

ಆಧಾರಗಳು
ರನ್ನನ ಅಜಿತನಾಥಪುರಾಣ ಮತ್ತು ಗದಾಯುದ್ಧ
ಮೂರನೇ ಸೋಮೇಶ್ವರನ - ಮಾನಸೋಲ್ಲಾಸ
ಬಿಲ್ಹಣನ - ವಿಕ್ರಮಾಂಕದೇವ ಚರಿತಾ
ವಿಜ್ಞಾನೇಶ್ವರನ - ಮಿತಾಕ್ಷರ

ರಾಜಕೀಯ ಇತಿಹಾಸ
ಎರಡನೇ ತೈಲಪ
ಕಲ್ಯಾಣಿ ಚಾಲುಕ್ಯರ ಸ್ಥಾಪಕ ದೊರೆ
ಮಾನ್ಯಖೇಟ ಈತನ ರಾಜಧಾನಿ
ಕ್ರಿ.ಶ.997 ರಲ್ಲಿ ಮರಣ ಹೊಂದಿದ

ಆರನೇ ವಿಕ್ರಮಾಧಿತ್ಯ
ಕಲ್ಯಾಣಿ ಚಾಲುಕ್ಯರ ಅತ್ಯಂತ ಪ್ರಸಿದ್ದ ದೊರೆ
ಈತ 09/03/1076 ರಲ್ಲಿ “ ಚಾಲುಕ್ಯ ವಿಕ್ರಮ ಶಕೆ ” ಎಂಬ ಹೊಸ ಶಕೆಯನ್ನ ಸ್ಥಾಪಿಸಿದ
ಈತನಿಗೆ ಭವನೈಕ್ಯಮಲ್ಲ ಮತ್ತು ಪೆರ್ಮಾಚಿದೇವ ಎಂಬ ಬಿರುದಿತ್ತು
ಈತನ ದಂಡ ನಾಯಕನ ಹೆಸರು - ಅಚ್ಚುಗಿ
ಕರ್ನಾಟಕ ಸರಸ್ವತಿ ಎಂದು ಪ್ರಸಿದ್ದರಾದವರು - ಚಂದ್ರಲಾದೇವಿ
ಬಳ್ಳಿಗಾಂವೆ ಈತನ ಕಾಲದ ಪ್ರಸಿದ್ದ ವಿಧ್ಯಾ ಕೇಂದ್ರ
ಈತ “ವಿಕ್ರಮ ಪುರ ” ಎಂಬ ನಗರವನ್ನು ನಿರ್ಮಿಸಿದ ನು
“ದೇವಾಲಯಗಳ ಚಕ್ರವರ್ತಿ ” ಎಂದು ಕರೆಯಲಾಗಿರುವ ದೇವಾಲಯ “ ಇಟಗಿಯ ಮಹಾದೇವಾ ದೇವಾಲಯ ” .
“ ಇಟಗಿಯ ಮಹಾದೇವಾ ದೇವಾಲಯ ” ಇದರ ನಿರ್ಮಾತೃ ಈತನ ದಂಡ ನಾಯಕ - ಮಹಾದೇವಾ ( ದಂಡಾದೀಶ )
ಈತ ಕ್ರಿ.ಶ.1026 ರಲ್ಲಿ ಮರಣ ಹೊಂದಿದನು

ಮೂರನೇ ಸೋಮೇಶ್ವರ :-
6 ನೇ ವಿಕ್ರಮಾಧಿತ್ಯನ ನಂತರ ಅಧಿಕಾರಕ್ಕೆ ಬಂದನು
ಮಾನಸೋಲ್ಲಾಸ ಮತ್ತು ವಿಕ್ರಮಾಭ್ಯುದಯ ಈತನ ಕೃತಿಗಳು
ಮಾನಸೋಲ್ಲಾಸದ ಇನ್ನೊಂದು ಹೆಸರು - “ಅಭಿಲಾಷಿತಾರ್ಥ ಚಿಂತಾಮಣಿ ”
“ಅಭಿಲಾಷಿತಾರ್ಥ ಚಿಂತಾಮಣಿ ” ಇದರ ಪ್ರತಿಯನ್ನು ಮೂರು ಭಾಗಗಳಾಗಿ ಪ್ರಕಟಿಸಿದ ಸಂಸ್ಥೆಯ ಹೆಸರು “ ಬರೋಡದ ಗಾಯಕವಾಡ್ ಓರಿಯಂಟಲ್ ಸಂಸ್ಥೆ ”
ಈತನ ಬಿರುದ - “ಸರ್ವಜ್ಞ ಚಕ್ರವರ್ತಿ ”
ಈತನ ಇತರೆ ಬಿರುದುಗಳು - ಭೂಲೋಕಮಲ್ಲ , ತ್ರಿಭುವನ ಮಲ್ಲ

ಕಲ್ಯಾಣಿ ಚಾಲುಕ್ಯರ ಆಡಳಿತ
ಮಂತ್ರಿಗಳ ವಿಧಗಳು - “ ಪ್ರಧಾನ ” ಮತ್ತು “ ಮಹಾಪ್ರಧಾನ ”
ಪ್ರಧಾನ ಮಂತ್ರಿಗೆ ಇರುತ್ತಿದ್ದ ಬಿರುದುಗಳು “ ಚೂಡಾಮಣಿ ” ಮತ್ತು “ ಅಮಾತ್ಯ ಕೇಸರಿ ”
ಸ್ಥಳೀಯ ಆಡಳಿತ ವರ್ಗಗಳು - ಗ್ರಾಮ ಮಹತ್ತರು ಮತ್ತು ರಾಷ್ಠ್ರ ಮಹತ್ತರರು
ಆಡಳಿತದ ಕೊನೆಯ ಘಟಕ - ಗ್ರಾಮ
ಗ್ರಾಮದ ಹಿರಿಯ ಬ್ರಾಹ್ಮಣರನ್ನು “ ಮಹಾಜನ ” ಎಂದು ಕರೆಯುತ್ತಿದ್ದರು .
ವೈಶ್ಯರನ್ನು - ನಬರ ಎಂದು ಕರೆಯುತ್ತಿದ್ದರು
ಇವರ ಆಡಳಿತದಲ್ಲಿದ್ದ ಭೂಕಂದಾಯ ಲೆಕ್ಕವಿಡುತ್ತಿದ್ದ ಮುಖ್ಯಸ್ಥನ ಹೆಸರು - ಕಡಿತವರ್ಗಡೆ
ಸೈನ್ಯದ ಪ್ರಮುಖ ಕೇಂದ್ರ ಕೋಟೆಗಳು
ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ - ಶಕ್ತಿ ಪೂಜೆಯ ಕೇಂದ್ರವಾಗಿತ್ತು
ರನ್ನನಿಗೆ ಆಶ್ರಯ ನೀಡಿದವರು - ಸತ್ಯಶ್ರಾಯ ಹಾಗೂ 2 ನೇ ತೈಲಪ
ಇವರ ಕಾಲದಲ್ಲಿದ್ದ ಸುಪ್ರಸಿದ್ದ ಜೈನ ಭಕ್ತೆ - ಅತ್ತಿಮಬ್ಬೆ
ಅತ್ತಿಮಬ್ಬೆಗೆ ಇದ್ದ ಬಿರುದು - ದಾನ ಚಿಂತಾಮಣಿ
ಬಳ್ಳಿಗಾಂವೆ , ಕೋಳಿವಾಡ ಮತ್ತು ಡಂಬಳ - ಮಹಾಯಾನ ಬೌಧ್ಧರ ಕೇಂದ್ರ

ಸಾಹಿತ್ಯ ( ಕನ್ನಡ )
ರನ್ನ - ಗದಾಯುದ್ಧ ಮತ್ತು ಅಜಿತನಾಥಪುರಾಣ ( ಕವಿಚಕ್ರವರ್ತಿ ಬಿರುದು )
ಎರಡನೇ ಚಾವುಂಡರಾಯ - ಲೋಕೋಪಕಾರ
ನಾಗವರ್ಮ - ಕರ್ನಾಟಕ ಕದಂಬರಿ ಮತ್ತು ಛಂದೋಬದಿ
ಚಂದ್ರರಾಜ - ಮದನ ತಿಲಕ
ಶ್ರೀಧರಚಾರ್ಯ - ಜಾತಕ ತಿಲಕ
ಕೀರ್ತಿವರ್ಮ - ಗೋವೈದ್ಯ
ಶಾಂತಿನಾಥ - ಸುಕುಮಾರ ಚರಿತ್ರೆ
ಮಾದವರ್ಮಾಚಾರ್ಯ - ಚಂದ್ರ ಚೂಡ ಮಣಿ
ನಯನ ಸೇನ - ಧರ್ಮಾಮೃತ
ದುರ್ಗಸಿಂಹ - ಪಂಚತಂತ್ರ

ಸಂಸ್ಕೃತ ಸಾಹಿತ್ಯ
ಜಗದೇಕ ಮಲ್ಲನ ಆಸ್ಥಾನ ಕವಿ - ವಾದಿರಾಜ
6 ನೇ ವಿಕ್ರಮಾಧಿತ್ಯನ ಅಶ್ರಿತ ಕವಿ - ಬಿಲ್ಹಣ
ವಾದಿರಾಜ - ಯಶೋಧರ ಚರಿತೆ ಮತ್ತು ಪಾರ್ಶ್ವನಾಥ ಚರಿತೆ
ಬಿಲ್ಹಣ - ವಿಕ್ರಮಾಂಕ ದೇವಚರಿತ
ವಿಜ್ಞಾನೇಶ್ವರ - ಮಿತಾಕ್ಷರ ಸಂಹಿತೆ
ಮೂರನೇ ಸೋಮೇಶ್ವರ - ಮಾನಸೋಲ್ಲಾಸ
ಜಗದೇಕ ಮಲ್ಲನ - ಸಂಗೀತ ಚೂಡಾಮಣಿ

Extra Tips
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬೀದರ್ ಜಿಲ್ಲೆಯ ಕಲ್ಯಾಣ
ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿದ ಕವಿ - ರನ್ನ
ಕನ್ನೇಗಾಲ ಕದನ ಸಂಭವಿಸಿದ್ದು - 6ನೇ ವಿಕ್ರಮಾಧಿತ್ಯ / ವಿಷ್ಣುವರ್ಧನ
ನೃತ್ಯವಿಧ್ಯಾದರಿ ಎಂಬ ಬಿರುದನ್ನು ಹೊಂದಿದ್ದವಳು - ಚಂದ್ರಲಾದೇವಿ
ಕನ್ನಡದ ಮೊದಲ ಪಶುವೈಧ್ಯ ಕೃತಿ - ಗೋವೈದ್ಯ ( ಕೀರ್ತಿವರ್ಮ )
ಕನ್ನಡದ ಮೊದಲ ಜೋತಿಷ್ಯ ಶಾಸ್ತ್ರ - ಜಾತಕ ತಿಲಕ ( ಶ್ರೀಧರಚಾರ್ಯ )
3 ನೇ ಸೋಮೇಶ್ವರ ನ ಬಿರುದು - ಭೂಲೋಕಮಲ್ಲ , ಸರ್ವಜ್ಞ ಚಕ್ರವರ್ತಿ ಹಾಗೂ ಸರ್ವಜ್ಞ ಭೂಪ
ಅಭಿನವ ಪಂಪ ಎಂದು ಖ್ಯಾತಿವೆತ್ತವರು - ನಾಗಚಂದ್ರಕವಿ
ಕನ್ನಡದ ಪ್ರಪ್ರಥಮ ಕವಯಿತ್ರಿ - ಕಂತಿ
ಅರಿಕೇಸರಿಯ ಆಸ್ಥಾನದ ಕವಿ - ಪಂಪ
ಸಾಹಸ ಭೀಮ ವಿಜಯ - ರನ್ನ
ಆದಿ ಕವಿ ಪಂಪ - ವಿಕ್ರಮಾರ್ಜುನ ವಿಜಯ ಹಾಗೂ ಆದಿಪುರಾಣ
ಪಂಪ ರಾಮಯಾಣ ಎಂದು ಖ್ಯಾತವಾದ ಕೃತಿ - ನಾಗ ಚಂದ್ರ ಕವಿಯ - ರಾಮಚರಿತಪುರಾಣ
ಎರಡನೇ ತೈಲಪನ ಬಿರುದು - ತ್ರೈಲೋಕ ಮಲ್ಲ
ಎರಡನೇ ತೈಲಪನ ದಂಡ ನಾಯಕ - ಬರ್ಫೆ
6ನೇ ವಿಕ್ರಮಾಧಿತ್ಯನ ದಂಡನಾಯಕ - ದಂಡಾದೀಶ
ಕನ್ನಡ ಮೊದಲ ಕಾಮಸಾಸ್ತ್ರ ಗ್ರಂಥ - ಮದನ ತಿಲಕ (ಚಂದ್ರರಾಜ )
ರನ್ನನಿಗೆ “ಕವಿಚಕ್ರವರ್ತಿ ” ಎಂಬ ಬಿರುದು ನೀಡಿದವರು - 2 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಕೊನೆಯ ದೊರೆ - 3 ನೇ ತೈಲಪ
ಕಲ್ಯಾಣಿ ಚಾಲುಕ್ಯರ ಆಳ್ವಿಕೆಯನ್ನು ಕೊನೆಗಾಣಿಸಿದವರು - ಕಲಚೂರಿ ಬಿಜ್ಜಳ
ಕಲ್ಯಾಣಿ ಚಾಲುಕ್ಯರ ರಾಜಧಾನಿ - ಬಿದರ್ ಜಿಲ್ಲೆಯ ಬಸವನ ಕಲ್ಯಾಣ
6 ನೇ ವಿಕ್ರಮಾಧಿತ್ಯನ ತಂದೆ ತಾಯಿ - 1 ನೇ ಸೋಮೇಶ್ವರ ಹಾಗೂ ಬಾಚಲಾ ದೇವಿಕಲಾಚೂರಿಗಳು
1. ಇವರ ಮೂಲ ಪುರುಷ - ಬಿಜ್ಜಳ
2. ಇವನ ಆಸ್ಥಾನದ ಮಂತ್ರಿ - ಬಸವಣ್ಣ
3. ಬಸವಣ್ಣ ನವರನ್ನ ಶಾಸನಗಳಲ್ಲಿ “ ಮಹೇಶ್ವರ ” ಎಂದು ಕರೆಯಲಾಗಿದೆ
4. ಇವರು ಮೂಲತಃ ಬುಂದೇಲ್ ಖಂಡದವರು
5. ಬಿಜ್ಜಳನ ಬಿರುದುಗಳು - ತ್ರಿಭುವನ ಮಲ್ಲ , ಭುಜ ಬಲ ಚಕ್ರವರ್ತಿ , ಕಲಚೂರಿ ಚಕ್ರವರ್ತಿ
6. ಸೋಮೇಶ್ವರ - ಬಿಜ್ಜಳನ ಮೊದಲ ಮಗ
7. ಈತನ ಇನ್ನೋಂದು ಹೆಸರು - ಸೋಮದೇವ
8. ಸೋಮೇಶ್ವರನ ಬಿರುದು - ರಾಯಮುರಾರಿ
9. ಕಲಚೂರಿ ಪದ ಮೂಲತಃ ಬುಂದೇಲ್ ಖಂಡದ “ ಕಲಿಂಜರ್ ” ದಿಂದ ಬಂದಿದೆ
10. ಕಲಚೂರಿಗಳ ಮೂಲ ರಾಜಧಾನಿ - ಕಲಿಂಜರಿ ಪುರ
11. ಕಲಚೂರಿ ಸಾಮ್ರಾಜ್ಯದ ಸ್ಥಾಪಕ - ಎರಡನೇ ಬಿಜ್ಜಳ
12. ಕಲಚೂರಿಗಳ ಲಾಂಛನ - ನಂದಿ ( ವೃಷಭ )
13. ಬಸವೇಶ್ವರರ ಜನ್ಮ ಸ್ಥಳ - ಬಾಗೇವಾಡಿ ಅಥವಾ ಬಸವನ ಬಾಗೇವಾಡಿ
14. ಬಸವೇಶ್ವರರು ಪುನರುತ್ಥಾನಗೊಳಿಸಿದ ಮತ - ವೀರಶೈವ ಧರ್ಮ
15. ಬಸವಣ್ಣನ ಅಂಕಿತ - ಕೂಡಲ ಸಂಗಮದೇವ
16. ಕಲ್ಯಾಣ ಇರುವ ಜಿಲ್ಲೆ - ಇಂದಿನ ಬಿಜಾಪುರ
17. ಬಸವೇಶ್ವರರು ಪ್ರಚುರ ಪಡಿಸಿದ ತತ್ವ - ಶಕ್ತಿ ವಿಶಿಷ್ಟಾದ್ವೈತ
18. ಬಸವಣ್ಣನ ತಂದೆ ತಾಯಿ - ಮಾದರಸ ಮತ್ತು ಮಾದಲಾಂಬಿಕೆ
19. ಅನುಭವ ಮಂಟಪದ ಸ್ಥಾಪಕರು - ಬಸವಣ್ಣ
20. ಕಲ್ಯಾಣಿ ಕಲಚೂರ್ಯರ ವಂಶ - ಹೈಹಯ ವಂಶ , ಇವರು ಮೂಲತಃ ಇತ್ತರ ಭಾರತದವರು
21. ಕಲಚೂರ್ಯರ ಆರಂಭದ ರಾಜಧಾನಿ - ಮಂಗಳವಾಡ
22. ಬಿಜ್ಜಳನ ಸೇನಾ ದಂಡ ನಾಯಕ - ಕಸಪಯ್ಯ
23. ಬಿಜ್ಜಳನನ್ನ ಕೊಂದವರು - ಜಗದೇವದಣ್ಣಾಯಕ ಬೊಮ್ಮರಸ ಮತ್ತು ಮಲ್ಲಿದೇವ
24. ಕಲಚೂರಿಗಳ ಕೊನೆಯ ಅರಸ - ಸಿಂಘಣ

ಹೊಯ್ಸಳರು :-
25. ಹೊಯ್ಸಳ ವಂಶದ ಮೊದಲ ದೊರೆ - ಸಳ
26. ಪ್ರಾರಂಭದ ರಾಜಧಾನಿಗಳು - ಸೊಸೆವೂರು , ಬೇಲೂರು , ದ್ವಾರಸಮುದ್ರ
27. ಹಳೇಬಿಡಿನ ಪ್ರಾಚೀನ ಹೆಸರು - ದ್ವಾರ ಸಮುದ್ರ

ಆಧಾರಗಳು
28. ಜನ್ನ - ಯಶೋಧರ ಚರಿತೆ
29. ರಾಜಾಧಿತ್ಯ - ವ್ಯವಹಾರ ಗಣಿತ
30. ನಾಗಚಂದ್ರ - ರಾಮಚರಿತ ಪುರಾಣ
31. ಕೇಶಿರಾಜ - ಶಬ್ದಮಣಿ ದರ್ಪಣ

ಹೊಯ್ಸಳರ ಮೂಲ
32. ಯಾದವ ಮೂಲ
33. ತಮಿಳು ಮೂಲ
34. ಕನ್ನಡ ಮೂಲ

ರಾಜಕೀಯ ಇತಿಹಾಸ
35. ಈ ವಂಶದ ಮೊದಲ ನಾಯಕ - ಸಳ
36. ಈತನಿಗೆ ಪ್ರವಚನದ ವೇಳೆ ಇದ್ದ ಮುನಿ - ಸುದತ್ತ ಮುನಿ
37. ಹೊಯ್ಸಳರ ಲಾಂಛನ - ಹುಲಿಯನ್ನು ಕೊಲ್ಲುವ ಸಳನ ಚಿತ್ರ
38. ಸಮರ್ಥ ಗಣ್ಯ ಹೊಯ್ಸಳ ದೊರೆ - ನೃಪಕಾಮ
39. ನೃಪಕಾಮನ ನಂತರ ಅಧಿಕಾರಕ್ಕೆ ಬಂದವರು - ವಿನಯಾಧಿತ್ಯ
40. ಇವರ ರಾಜಧಾನಿ - ಸೊಸೆವೂರು
41. ರಾಜದಾನಿಯನ್ನು ಸೋಸೆಯೂರಿನಿಂದ ಹಳೇಬಿಡಿಗೆ ವರ್ಗಾಯಿಸಿದವರು - ವಿನಯಾಧಿತ್ಯ
42. ಹಳೇಬಿಡಿಗೆ ದ್ವಾರ ಸಮುದ್ರವೆಂದು ನಾಮಕರಣ ಮಾಡಿದವರು - ವಿನಯಾದತ್ಯ
43. ರಾಜಧಾನಿಯನ್ನು ಬೇಲೂರಿಗೆ ಬದಲಾಯಿಸಿದವರು - 1 ನೇ ಬಲ್ಲಾಳ

ವಿಷ್ಣುವರ್ಧನ
44. ಹೊಯ್ಸಳ ವಂಶದ ಅತ್ಯಂತ ಶ್ರೇಷ್ಠ ದೊರೆ
45. ಇವನ ಮೂಲ ಹೆಸರು - ಬಿಟ್ಟಿದೇವ
46. ಇವನು ಶ್ರೀರಾಮಾನುಜಚಾರ್ಯರಿಗೆ ಆಶ್ರಯ ನೀಡಿದನು
47. ರಾಜಧಾನಿಯನ್ನು ಬೇಲೂರಿನಿಂದ ದ್ವಾರ ಸಮುದ್ರಕ್ಕೆ ಬದಲಾಯಿಸಿದನು
48. ಅಧಿಕಾರಕ್ಕೆ ಬರುವ ಮುನ್ನ - ನಂಜನಗೂಡಿನ ಪ್ರಾಂತ್ಯಾಧಿಕಾರಿಯಾಗಿದ್ದನು
49. ಪ್ರಥಮ ದಂಡಯಾತ್ರೆಯನ್ನು ಚೋಳರ ಅಧಿವಶದಲ್ಲಿದ್ದ ಗಂಗವಾಡಿಗೆ ಹಾಕುವ ಮೂಲಕ ಆರಂಭಿಸಿದನು
50. ಈತನ ದಂಡನಾಯಕ - ಗಂಗರಾಜ
51. ಈತನ ಬಿರುದುಗಳು - ತಲಕಾಡುಗೊಂಡ , ವೀರಗಂಗ ಹಾಗೂ ಕಾಂಚಿಗೊಂಡ , ಉಚ್ಚಂಗಿಗೊಂಡ
52. ಈತನ ಪತ್ನಿ - ಚಂದ್ರಲಾದೇವಿ , ಶಾಂತಲಾದೇವಿ ಹಾಗೂ ಲಕ್ಷ್ಮೀದೇವಿ
53. ಈತನ ಉಪರಾಜಧಾನಿ - ಹಾನಗಲ್ ಹಾಗೂ ಬಂಕಾಪುರ
54. ಕ್ರಿ,ಶ.1137 ರಲ್ಲಿ “ ತುಲಾಪುರುಷ ” ಎಂಬ ಸಮಾರಂಭ ಏರ್ಪಡಿಸಿದನು
55. ಈತನ ಆಸ್ಥಾನ ಕವಿ - ಜೈನ ವಿದ್ವಾಂಸ ರಾಜಾಧಿತ್ಯ
56. ಧರ್ಮಾಮೃತ ಕೃತಿಯ ಕರ್ತೃ - ನಯನ ಸೇನ
57. “ ಅಭಿನವ ವಾಗ್ದೇವಿ ” ಎಂದು ಹೆಸರಾಗಿದ್ದವರು - ಕಂತಿ

ಎರಡನೇ ಬಲ್ಲಾಳ
58. ಹೊಯ್ಸಳ ವಂಶದ - ಎರಡನೇ ಶ್ರೇಷ್ಠ ದೊರೆ
59. ದಕ್ಷಿಣ ಚಕ್ರವರ್ತಿ - ಈತನ ಬಿರುದು
60. ಈತನನ್ನು ಹೊಯ್ಸಳ ವಂಶದ ಮೊದಲ ಸ್ವತಂತ್ರ ದೊರೆ ಎಂದು ಕರೆಯಲಾಗಿದೆ
61. ಈತನ ಬಿರುದುಗಳು - ಶನಿವಾರ ಸಿದ್ದಿ , ಗಿರಿದುರ್ಗಮಲ್ಲ , ಪಾಂಡ್ಯರಾಜ ನಿರ್ಮೂಲನ ಈ ಬಿರುದನ್ನು ಪಾಂಡ್ಯ ರನ್ನ ಸೋಲಿಸುವ ಮೂಲಕ ಪಡೆದುಕೊಂಡ
62. ಚೋಳರನ್ನ ಸದೆಬಡಿದು - “ ಚೋಳ ರಾಜ್ಯ ಪ್ರತಿಷ್ಠಾಪನಾಚಾರ್ಯ ” ಎಂಬ ಬಿರುದನ್ನ ಪಡೆದನು
63. ಈತನ ರಾಜಧಾನಿಗಳು - ದ್ವಾರಸಮುದ್ರ ಹಾಗೂ ಅರಸಿಕೆರೆ
64. ಹೊಯ್ಸಳರ ಕಾಲದಲ್ಲಿ ಅರಸಿಕೆರೆಗೆ ಇದ್ದ ಬಿರುದು - “ಭಂಡಾರ ವಾಡ ”
65. ಜನ್ನನಿಗೆ ಉಭಯ ಕವಿ ಚಕ್ರವರ್ತಿ ಎಂಬ ಬಿರುದನ್ನು ನೀಡಿದವರು - 2 ನೇ ಬಲ್ಲಾಳ
66. ಈತನ ದಂಡನಾಯಕ - ಎರೆಯಣ್ಣ
67. ಪಾಂಡ್ಯಕುಲ ಸಂರಕ್ಷಾಣ ದಕ್ಷಿಮ ಭುಜ ಎಂಬ ಬಿರುದನ್ನು ಧರಿಸಿದ್ದ ದೊರೆ - ಸೋಮೇಶ್ವರ
68. ಹೊಯ್ಸಳರ ಕೊನೆಯ ದೊರೆ - ಮೂರನೇ ಬಲ್ಲಾಳ
69. ಹಂಪೆಯ ಹತ್ತಿಯ ವಿಜಯ ವಿರೂಪಾಕ್ಷ ಪುರ ಎಂಬ ಹೊಸ ರಾಜಧಾನಿಯನ್ನು ಸ್ಥಾಪಿಸಿದ ದೊರೆ - ಮೂರನೇ ಬಲ್ಲಾಳ

ಹೊಯ್ಸಳರ ಆಡಳಿತ
70. ಗರುಡ - ರಾಜನ ವಿಶೇಷ ಅಂಗರಕ್ಷಕರು
71. ಪಂಚ ಪ್ರಧಾನ ಸಭೆ - ಹೊಯ್ಸಳರ ಮಂತ್ರಿ ಪರಿಷತ್ತು
72. ನಾಡ ಹೆಗ್ಗಡೆ - ಜಿಲ್ಲೆಯ ಮುಖ್ಯ ಅಧಿಕಾರಿ
73. ರಾಮಚರಿತ ಪುರಾಣದ ಇನ್ನೊಂದು ಹೆಸರು - ಪಂಪ ರಾಮಯಣ
74. ಕವಿತಾ ಮನೋಹರ ಎಂಬ ಬಿರುದು ಹೊಂದಿದ್ದ ಕವಿ - ನಾಗಚಂದ್ರ
75. ಕಂತಿಯು ಬರೆದ ಕೃತಿ - ಪಂಪನ ಸಮಸ್ಯೆಗಳು
76. ವಿಷ್ಣುವರ್ಧನನ ಆಸ್ಥಾನದ ಕವಿ - ರಾಜಾಧಿತ್ಯ
77. ರಗಳೆಯ ಕವಿ ಎಂದು ಪ್ರಸಿದ್ದರಾದವರು - ಹರಿಹರ
78. ಕಬ್ಬಿಗರ ಕಾವ್ಯ ಕೃತಿಯ ಕರ್ತೃ - ಆಂಡಯ್ಯ
79. ಕನ್ನಡದಲ್ಲಿ ಬ್ರಾಹ್ಮಮ ವರ್ಗದ ಮೊಟ್ಟ ಮೊದಲನೆಯ ಪ್ರಸಿದ್ದ ಕವಿ - ರುದ್ರಭಟ್ಟ
80. ರುದ್ರಭಟ್ಟನ ಕೃತಿ - ಜಗನ್ನಾಥ ವಿಜಯ
81. ಬೇಲೂರಿನ ಚೆನ್ನಕೇಶವ ದೇವಾಲಯದ ನಿರ್ಮಾತೃ - ವಿಷ್ಣುವರ್ಧನ
82. ಬೇಲೂರಿನ ಚೆನ್ನಕೇಶವ ದೇವಾಲಯದ ಅತಿ ಸುಂದರ ಕಂಬಗಳು - ನರಸಿಂಹ ಕಂಬ ಹಾಗೂ ಮೋಹಿನಿ ಕಂಬ
83. ಬೇಲೂರಿನ ಚೆನ್ನಕೇಶವ ದೇವಾಲಯದ ನವರಂಗ ಮೇಲ್ಛಾವಣಿಯನ್ನು - ಭುವನೇಶ್ವರಿ ಎಂದು ಕರೆಯಲಾಗಿದೆ
84. ವಾಸ್ತುಶಿಲ್ಪದ ಚಾಲುಕ್ಯ ಹೊಯ್ಸಳ ಪಂಥದ ಅತ್ಯುನ್ನತ ಸಾಧನೆ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯ
85. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ನಿರ್ಮಾತೃ ವಿಷ್ಣುವರ್ಧನನ ದಂಡನಾಯಕ ಕೇತಮಲ್ಲ ( 1121 )
86. ಹಳೇಬಿಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಿ - ಕೇದಾರೋಜ
87. ಫರ್ಗ್ಯೂಸನ್ ರವರು ಭಾರತೀಯ ವಾಸ್ತುಶಿಲ್ಪದ ಒಂದು ರತ್ನ ಎಂದು ಬಣ್ಣಿಸಿರುವ ದೇವಾಲಯ - ಹಳೇಬಿಡಿನ ಕೇದಾರೇಶ್ವರ ದೇವಾಲಯ .
88. ಸೋಮನಾಥ ಪುರದಲ್ಲಿರುವ ಕೇಶವ ದೇವಾಲಯದ ನಿರ್ಮಾತೃ - ಮೂರನೇ ನರಸಿಂಹನ ದಂಡ ನಾಯಕ ಸೋಮನಾಥ ( ಕ್ರಿ.ಶ. 1268 ) .
89. ಬ್ರಿಟಿಷ್ ಪುರಾತತ್ವ ಇಲಾಖೆಯವರು Wedding Cake ಎಂದು ಕರೆದಿರುವ ದೇವಾಲಯ - ಸೋಮನಾಥಪುರದ ಕೇಶವ ದೇವಾಲಯ .
90. ಸೋಮನಾಥಪುರದ ಕೇಶವ ದೇವಾಲಯ - ಬಳಪದ ಕಲ್ಲಿನಲ್ಲಿ ನಿರ್ಮಾಣವಾಗಿದೆ
91. ಮೆಕ್ಕೆ ಜೋಳವನ್ನ ಕಂಡು ಹಿಡಿದವರು - ಅಮೆರಿಕಾದವರು
92. ವಿಷ್ಣುವರ್ಧನನ ರಾಣಿ - ಶಾಂತಲೆ ( ಬಿರುದು - ನೃತ್ಯವಿಶಾರದೆ )
93. ಕವಿರಾಜ ಮಲ್ಲ ಎಂದೇ ಹೆಸರಾದವರು - ನೇಮಿಚಂದ್ರ
94. ಕನ್ನಡದ ಮೊದಲ ವ್ಯಾಕರಮ ಗ್ರಂಥ - ಕೇಶಿರಾಜನ , ಶಬ್ದಮಣಿದರ್ಪಣ
95. ಆರನೇ ವಿಕ್ರಮಾಧಿತ್ಯನ ಗುರು - ವಿಜ್ಞಾನೇಶ್ವರ
96. ಬೇಲೂರಿನ ಕಪ್ಪೆ ಚೆನ್ನಿಗ ದೇವಸ್ಥಾವನ್ನ ಕಟ್ಟಿಸಿದವರು - ಶಾಂತಲೆ
97. ವಿಷ್ಣುವರ್ಧನನು ವೈಷ್ಣವ ಮತ ಸ್ವೀಕರಿಸಲು ಕಾರಣ ಕರ್ತರು - ಶ್ರೀರಾಮಾನುಜಚಾರ್ಯರು
98. ಮಲೆ ಪೆರುಳ್ ಗೊಂಡ ಎಂಬ ಬಿರುದನ್ನು ಧರಿಸಿವರು - ನೃಪಕಾಮ
99. ಒಂದನೇ ಬಲ್ಲಾಳನ ಕಾಯಿಲೆಯನ್ನು ಗುಣಪಡಿಸಿದವರು - ಚಾರು ಕೀರ್ತಿ ಪಂಡಿತ ನಂತರ ಈತನು ಬಲ್ಲಾಳನಿಂದ ಪಡೆದ ಬಿರುದು - ಜೀವರಕ್ಷಕ
100. ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 2ನೇ ಬಲ್ಲಾಳ
101. ಸೋಮೇಶ್ವರನ ಆಡಳಿತ ಕೇಂದ್ರ - ಕಣ್ಣನೂರು
102. ಹೊಯ್ಸಳರ ಕುಲದೇವತೆ - ಸೊಸೆವೂರು ವಾಸಂತಿಕಾ ದೇವಿ
103. ಎರೆಯಂಗನ ಶಿಕ್ಷಾ ಗುರುಗಳು - ಜೈನ ಮುನಿ ಅಜಿತ ಸೇನಾ
104. ಹೊಯ್ಸಳರ ಕಾಲದಲ್ಲಿ ಬ್ರಾಹ್ಮಣರಿಗೆ ಕೊಟ್ಟ ಭೂಮಿಯನ್ನು - ಬ್ರಹ್ಮದೇಯ ಎಂದು ಕರೆಯಲಾಗುತ್ತಿತ್ತು
105. ಹರಿಶ್ಚಂದ್ರ ಕಾವ್ಯವನ್ನ ಬರದೆ ಕವಿ - ರಾಘವಂಕ
106. ಹೊಯ್ಸಳರು - ಯಾದವ ವಂಶಕ್ಕೆ ಸೇರಿದವರು
107. ಹಳೇಬೀಡು - ಹಾಸನ ಜಿಲ್ಲೆಯಲ್ಲಿದೆ
108. ಹೊಯ್ಸಳರ ಸೈನ್ಯಕ್ಕಿದ್ದ ಹೆಸರು - ಗರುಡ ಸೈನ್ಯ
109. ವಿಷ್ಮುವರ್ಧನನು ಮರಣ ಹೊಂದಿದ ಪ್ರದೇಶ - ಬಂಕಾಪುರ
110. ಸರಸಕವಿ ಸಾರ್ವಭೌಮ ಎಂದು ಕರೆಯಲ್ಪಡುವ ಕವಿ - ಹರಿಹರ
111. ಕರ್ನಾಟಕದಲ್ಲಿ ಹೊಯ್ಸಳರ ಪ್ರಮುಖ ಕೇಂದ್ರ - ಮೇಲುಕೋಟೆ

5 ಕಾಮೆಂಟ್‌ಗಳು: