ಶುಕ್ರವಾರ, ಮಾರ್ಚ್ 18, 2011

ದೆಹಲಿಯ ಸುಲ್ತಾನರು

ಭಾರತಕ್ಕೆ ಮುಸಲ್ಮಾನರು
ದೆಹಲಿಯ ಸುಲ್ತಾನರು
ಭಾರತ ಸಕಲ ಸಂಪತ್ತನ್ನು ಹೊಂದಿದ್ದ ರಾಷ್ಟ್ರವಾಗಿದ್ದರಿಂದ ಅರಬ್ಬರ ಕಣ್ಣು ಯಾವಾಗಲೂ ಭಾರತದ ಮೇಲೆ ಇರುತ್ತಿತ್ತು
ಸುಮಾರು - 7 ನೇ ಶತಮಾನದ ಹೊತ್ತಿಗೆ ಮಹಮ್ಮದ್ ಬಿನ್ ಕಾಸಿಂ ನ ನೇತೃತ್ವದಲ್ಲಿ ಕ್ರಿ.ಶ.712 ರಲ್ಲಿ ಧರ್ಮ ಪ್ರಚಾರದ ಹೆಸರಿನಲ್ಲಿ ದಂಡಯಾತ್ರೆಯನ್ನು ಕೈಗೊಂಡು ಬಲೂಚಿಸ್ಥಾನವನ್ನು ಗೆದ್ದು ಸಿಂಧ್ ಪ್ರಾಂತ್ಯದ ಮೇಲೆ ಧಾಳಿ ಮಾಡಿ ಜಯಗಳಿಸಿದನು ( 150 ವರ್ಷ ನೆಲೆನಿಂತರ
ಮಹಮ್ಮದ್ ಬಿನ್ ಖಾಸಿಂನು - ದಾಹಿರನನ್ನು ಗೆದ್ದು ಸೂರ್ಯದೇವಾಲಯವನ್ನು ನೆಲಸಮ ಮಾಡಿದ
ಪ್ರಾರಂಭದಲ್ಲಿ - ವ್ಯಾಪಾರ ಸಾಂಸ್ಕೃತಿಕ ಸಂಪರ್ಕ ಬೆಳೆಯಿತು
ಭಾರತದ ಜ್ಞಾನ ಭಂಡಾರವನ್ನು - ಯೂರೋಪಿಗೆ ಒಯ್ದರು
ವಿವಿಧ ಶಾಸ್ತ್ರಗಳ ಸಾಹಿತ್ಯ ಪುಸ್ತಕಗಳನ್ನು ತೆಗೆದುಕೊಂಡು ಹೋದರು
ಹಾಗೇಯೆ ಖಲೀಫ ಭಾರತದ ತಜ್ಞರನ್ನು ಆಮಂತ್ರಿಸಿ ಅವರಿಂದ ಸೇವೆಯನ್ನು ಮಾಡಿಸಿಕೊಂಡ
ಅರಬ್ಬರ ಭಾರತದ ರಕ್ತ ಸಂಬಂಧದಿಂದ ಬಾರತದಲ್ಲಿ ಮುಸ್ಲಿಮರು ಅಸ್ತಿತ್ವಕ್ಕೆ ಬಂದರು ಹಾಗೇಯೇ ಇಸ್ಲಾಂ ಧರ್ಮ ಪ್ರಚಾರದ ಪ್ರಾರಂಭವಾಯಿತು

ಟರ್ಕರು
ಅರಬ್ಬರಂತೆ ಕ್ರಿ.ಶ.10 ನೇ ಶತಮಾನದಲ್ಲಿ ಉತ್ತರಾರ್ಧದಲ್ಲಿ ಟರ್ಕರು ಕೂಡ ಭಾರತದ ಮೇಲೆ ಆಕ್ರಮಣವೆಸಗಿದರು ಎರಡು ಹಂತದಲ್ಲಿ ಭಾರತದ ಮೇಲೆ ಆಕ್ರಮಣ ಎಸಗುವರು ಅದರಲ್ಲಿ ಮೊದಲ ಹಂತದ ನೇತೃತ್ವವನ್ನು ಮಹಮ್ಮದ್ ಘಜ್ನಿ ಹೊಂದಿದ್ದರೆ ಎರಡನೇ ಹಂತದ ನೇತೃತ್ವವನ್ನು ಘೋರಿಮಹಮ್ಮದ್ ವಹಿಸಿದ್ದನು
ಇವರಿಬ್ಬರ ದಂಡಯಾತ್ರೆಗಳು ಭಾರತದಲ್ಲಿ ಮುಸ್ಲಿಂ ಅಧಿಪತ್ಯಕ್ಕೆ ತಳಹದಿಯನ್ನು ಹಾಕಿಕೊಟ್ಟತು

ಮಹಮ್ಮದ್ ಘಜ್ನಿ
ಕ್ರಿ.ಶ.10 ಶತಮಾನದ ವೇಳೆಗ - ಭಾರತದ ವಾಯುವ್ಯ ಭಾಗದಿಂದ ಟರ್ಕರ ಧಾಳಿಯಾಯಿತು
ಈ ವೇಳೆ ಅಫಘಾನಿಸ್ಥಾನದಲ್ಲಿ ಟರ್ಕರ ಒಂದು ಹೊಸ ರಾಜ್ಯ ತಲೆಯೆತ್ತಿತ್ತು ಅದರ ರಾಜಧಾನಿ - ಘಜ್ನಿ
ಘಜ್ನಿಯ ಅಮೀರ ( ತುರ್ಕಿ ಮೂಲದ ಗುಲಾಮ ಅಲ್ತಗೀನ ಘಜ್ನಿಯನ್ನು ಒಂದು ರಾಜಧಾನಿಯನ್ನಾಗಿ ಮಾಡಿಕೊಂಡು ಸ್ವತಂತ್ರ ರಾಜ್ಯವೊಂದನ್ನು ಸ್ಥಾಪಿಸಿದನು
ಇವನ ಸಂಬಂಧಿ - ಸಬಕ್ತಗೀನ್
ಈತ ಕ್ರಿ.ಶ.977 ರಲ್ಲಿ ಅಧಿಕಾರಕ್ಕೆ ಬಂದು ರಾಜ್ಯವನ್ನು ಟೀನಾಬ್ ನದಿಯವರೆಗೆ ವಿಸ್ತರಿಸಿದ
ಇವನ ಹಿರಿಯ ಮಗನೇ - ಮಹಮ್ಮದ್ ಘಜ್ನಿ
ಇವನು ಕ್ರಿ.ಶ.1001 ರಿಂದ 1026 ರವರೆಗೆ ಭಾರತದ ಮೇಲೆ 17 ಭಾರಿ ದಂಡಯಾತ್ರೆ ಮಾಡಿ ಅಪಾರ ಸಂಪತ್ತು ಹಾಗೂ ಗುಲಾಮರನ್ನು ಅಫಘಾನಿಸ್ತಾನಕ್ಕೆ ಒಯ್ದನು
ಈತನ ಆಳ್ವಿಕೆ ಆರಂಭ - ಕ್ರಿ.ಶ.997 ರಿಂದ 1030
ಈತನ ಜನನ - 971
ಈತನ ತಂದೆ - ಸಬಕ್ತಗೀನ್
ಹುಟ್ಟಿದ ಸ್ಥಳ - ಅಪಘಾನಿಸ್ಥಾನದ ಘಜ್ನಿ
ಶಿಕ್ಷಣ - ತಂದೆಯಿಂದ ಪಡೆದುಕೊಂಡ
ಪಟ್ಟಕ್ಕೆ ಬಂದಿದ್ದು - ಕ್ರಿ.ಶ.997
ಪಟ್ಟಕ್ಕೆ ಬಂದ ನಂತರ ಪಡೆದ ಬಿರುದು - ಸುಲ್ತಾನ
ಧರ್ಮದ ಹೆಸರಿನಲ್ಲಿ - ಗುಡಿಗೋಪುರಗಳನ್ನು ಕೊಳ್ಳೆ ಹೊಡೆದು ನಾಶಮಾಡಿದ
ಈತನ ಪ್ರಥಮ ಉದ್ದೇಶ - ಸಂಪತ್ತನ್ನು ಕೊಳ್ಳೆ ಹೊಡೆಯುವುದು , ಇಸ್ಲಾಂ ಧರ್ಮ ಪ್ರಸಾರ , ಪ್ರದೇಶಗಳನ್ನು ಆಕ್ರಮಿಸಿಕೊಳ್ಳುವ ಉದ್ದೇಶ
ಭಾರತದ ಮೇಲೆ ಘಜ್ನಿ ಮಹಮ್ಮದನ ದಂಡಯಾತ್ರೆ

ಕ್ರಿ.ಶ.1000 - ಖೈಬರ್
ಕ್ರಿ.ಶ. 1001 – 02 - ಜೈಪಾಲನ ವಿರುದ್ಧ
ಕ್ರಿ.ಶ. 1003 - ಭಾಟಿಯಾ ರಾಜ್ಯ
ಕ್ರಿ.ಶ. 1006 - ಮುಲ್ತಾನ
ಕ್ರಿ.ಶ. 1007 - ಸುಖ ಪಾಲನ ವಿರುದ್ಧ
ಕ್ರಿ.ಶ. 1008 - ಆನಂದ ಪಾಲನ ವಿರುದ್ಧ
ಕ್ರಿ.ಶ. 1009 - ನಗರ ಕೋಟೆ ( ಕಾಂಗ್ರಾ ನುತ್ತಿಗೆ )
ಕ್ರಿ.ಶ. 1010 - ಮುಲ್ತಾನ್
ಕ್ರಿ.ಶ. 1012 - ಕಾಶ್ಮೀರ
ಕ್ರಿ.ಶ.1014 - ಥಾಣೇಶ್ವರ
ಕ್ರಿ.ಶ. 1018 - ಕನೂಜ್
ಕ್ರಿ.ಶ. 1019 - ಕಲಿಂಜರ್
ಕ್ರಿ.ಶ. 1020 - ಕನೂಜ್
ಕ್ರಿ.ಶ. 1021 - ಗ್ವಾಲಿಯರ್
ಕ್ರಿ.ಶ. 1022 - ಕಲಿಂಜರ್
ಕ್ರಿ.ಶ. 1026 – 26 - ಗುಜರಾತಿನ ಸೋಮನಾಥನ ವಿರುದ್ಧ
ಕ್ರಿ.ಶ. 1027 - ಗುಜರಾತಿನ ವಿರುದ್ಧ

a. ಕ್ರಿ.ಶ. 1000 - ಖೈಬರ್ :-
b. ಕ್ರಿ.ಶ. 1001 – 02 ಜಯಪಾಲನ ವಿರುದ್ಧ :- ಪೇಷಾವರದ ಮೇಲೆ ಧಾಳಿ ಮಾಡಿ ಅಲ್ಲಿನ ದೊರೆ ಜಯಪಾಲನನ್ನು ಸೋಲಿಸಿದನು . ಈ ಅವಮಾನವನ್ನು ತಾಳದೆ ಜಯಪಾಲನು ಆತ್ಮಹತ್ಯೆ ಮಾಡಿಕೊಂಡನು ( ಬೆಂಕಿಗೆ ಹಾರಿ ) ಈ ಯುದ್ಧದಲ್ಲಿ 250000 ದಿನಾರುಗಳನ್ನು ಹಾಗೂ 50 ಆನೆಗಳನ್ನು ಪಡೆದುಕೊಂಡನು .
c. ಕ್ರಿ.ಶ. 1003 ರ ಭಾಟಿಯಾ ರಾಜ್ಯದ ವಿರುದ್ಧ ದಂಡಯಾತ್ರೆ :- ಮುಲ್ತಾನ ನೈರುತ್ಯಕ್ಕಿದ್ದ ಈ ಸಾಮ್ರಾಜ್ಯಕ್ಕೆ ಧಾಳಿ ನೆಡಸಿದ ಅಲ್ಲಿನ ಬಿಜಾಯ್ ರಾಯ್ ನೊಂದಿಗೆ ಹೋರಾಡಿ ಆತನನ್ನು ಬಂಧಿಸಿದನು.ವಿಧಿಯಿಲ್ಲದೆ ಬಿಜಾಯ್ ರಾಯ್ ತನ್ನ ಚೂರಿಯಿಂದಲೇ ಇರಿದುಕೊಂಡು ಸಾವನ್ನಪ್ಪಿದ . ತದ ನಂತರ ಘಜ್ನಿ ಸಂಪತ್ತನ್ನು ಕೊಳ್ಳೆ ಹೊಡೆದದ್ದಲ್ಲದೇ ಹಲವು ಜನರನ್ನು ಕಗ್ಗೋಲೆ ಮಾಡಿ ಅಧಿಕ ಜನರನ್ನು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಬಲತ್ಕಾರ ಮಾಡಿದ
d. ಕ್ರಿ..ಶ. 1006 ರ ಮುಲ್ತಾನ್ ನ ದಂಡಯಾತ್ರೆ :- ಘಜ್ನಿಯ ಸೇನೆ ಮುಲ್ತಾನನ್ನು ಆಕ್ರಮಿಸಲು ಆನಂದ ಪಾಲನ ಪ್ರಭುತ್ವಕ್ಕೆ ಒಳಪಟ್ಟಿದ್ದ ಪ್ರದೇಶದ ಮೂಲಕ ಹೋಗಬೇಕಿತ್ತು ಿದಕ್ಕೆ ಆನಂದ ಪಾಲನು ಅವಕಾಶ ಮಾಡಿಕೊಡದಿದ್ದುದರಿಂದ ಟರ್ಕರ ಸೇನೆ ಆನಂದ ಪಾಲನ ವಿರುದ್ಧ ಆಕ್ರಮಣ ನಡೆಸಿ ಆತನನ್ನು ಸೋಲಿಸಿ ಜೈಪಾಲನ ಮೊಮ್ಮಗ ನವಾಜ್ ಷಾ ನನ್ನು ಇಸ್ಲಾಂ ಧರ್ಮಕ್ಕೆ ಸೇರಿಸಿ ಆತನ ಅಧೀನಕ್ಕೆ ಆ ಪ್ರದೇಶಗಳನ್ನು ಒಳಪಡಿಸಿ ಘಜ್ನಿಗೆ ಹಿಂತಿರುಗಿದನು . ಆ ಸುಸಂಧರ್ಭವನ್ನು ಬಳಸಿಕೊಂಡ ನವಾಜ್ ಷಾ ಇಸ್ಲಾಂ ಧರ್ಮವನ್ನು ತ್ಯಜಿಸಿ ಸ್ವತಂತ್ರ ಘೋಷಿಸಿಕೊಂಡನು . ಪರಿಣಾಮವಾಗಿ ಘಜ್ನಿ ಪುನಃ ಭಾರತಕ್ಕೆ ಧಾಳಿ ನಡೆಸಿದ
e. ಕ್ರಿ.ಶ. 1007 ನವಾಜ್ ಷಾ ( ಸುಖಪಾಲ )ನ ವಿರುದ್ಧ ದಂಡಯಾತ್ರೆ :- ಈ ದಂಡಯಾತ್ರೆಯಲ್ಲಿ ಸುಖಪಾಲನನ್ನು ಸೋಲಿಸಿ ಸಾಮ್ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡನು
f. ಕ್ರಿ.ಶ. 1008 ಆನಂದ ಪಾಲನ ವಿರುದ್ಧ ದಂಡಯಾತ್ರೆ :- ಆನಂದಪಾಲ ವಿಚಾರ ತಿಳಿದು ಉಜೈಯಿನಿ ಗ್ವಾಲಿಯರ್ ಕಲಿಂಜರ್ ಅಜ್ಮೀರ್ ಗಳ ಅರಸರ ಸಹಾಯ ಯಾಚಿಸಿ ಯುದ್ಧಕ್ಕೆ ಸನ್ನದ್ಧನಾದ , ಪ್ರತಿಯೊಬ್ಬ ಜನರೂ ಹೋರಾಟಕ್ಕೆ ಹಣ ನೀಡಿದರು , ಮಹಿಳೆಯೊಬ್ಬಳು ತನ್ನ ಆಭರಣ ಮಾರಿ ಹಣ ನೀಡಿದಳು , ಪಂಜಾಬಿನ ಬುಡಕಟ್ಟು ಜನಾಂಗ ಖೋಖರರು ಆನಂದ ಪಾಲನ ಪರ ಹೋರಾಟಕ್ಕೆ ಸಜ್ಜಾದರು , ವಾಹಿದ್ ಬಯಲು ಪ್ರದೇಶದಲ್ಲಿ 2 ನಡುವೆ ಭೀಕರ ಹೋರಾಟ ನಡೆಯಿತು , ಆನಂದ ಪಾಲ ಸೋಲನುಭವಿಸಿದ , 4000 ಸೇನಾನಿಗಳನ್ನು ಕಳೆದು ಕೊಂಡ , ಘಜ್ನಿಗೆ ಅಪಾರ ಸಂಪತ್ತು ಲಭ್ಯವಾಯಿತು , ಪಂಜಾಬ್ ಹಾಗೂ ವಾಯುವ್ಯ ಭಾರತದ ಪ್ರಭುತ್ವಕ್ಕಾಗಿ ಘಜ್ನಿ ಪರಿತಪಿತನಾದ
g. ಕಾಂಗ್ರಾ ಮುತ್ತಿಗೆ ಕ್ರಿ.ಶ.1009 :- ಲಾಹೋರಿನ ಬಳಿಯಿರುವ ಕಾಂಗ್ರಾಕ್ಕೆ ಮುತ್ತಿಗೆ ಹಾಕಿದ , ಕಾಂಗ್ರಾವನ್ನು ಹಿಂದೆ ನಗರ್ ಕೋಟ್ , ಭೀಮ್ ನಗರ್ ಎಂಬ ಹೆಹಸರಿನಿಂದ ಕರೆಯಲಾಗುತ್ತಿತ್ತು , ಸತತ ಮೂರು ದಿನ ಹೋರಾಡಿದ ನಂತರ ವಶಪಡಿಸಿಕೊಂಡ , ಎಷ್ಟು ಒಂಟೆಗಳು ಲಭ್ಯವಿದ್ದವೋ ಅಷ್ಟು ಒಂಟೆಗಳ ಮೇಲೆ ಹೇರುವಷ್ಟು ಸಂಪತ್ತು ಬೆಳ್ಳಿ , ಬಂಗಾರ ,ನಾಣ್ಯಗಳ ರೂಪದಲ್ಲಿ ಲಭ್ಯವಾಯಿತು
h. ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರ :- ಕ್ರಿ.ಶ. 1010 ರಿಂದ 1014 ರವರೆಗೆ ಭಾರತದ ಪ್ರಮುಖ ಪ್ರದೇಶಗಳಾದ ಮುಲ್ತಾನ್ ಕಾಶ್ಮೀರ ಹಾಗೂ ಥಾಣೇಶ್ವರಗಳಿಗೆ ಮುತ್ತಿಗೆ ಹಾಕಿ ಅಪಾರ ಸಂಪತ್ತು ಲೂಟಿ ಮಾಡಿದ 1018 ರವರೆಗೆ ವಿವಿದೆಡೆ ಧ್ವಂಸ ಮಾಡಿದ
i. ಕನೂಜ್ ವಿರುದ್ಧ ದಡಯಾತ್ರೆ ಕ್ರಿ.ಶ. 1018 :- ಮಾರ್ಗ ಮಧ್ಯ ಮಹಮ್ಮದ್ ಬುಲಂದರ್ ಷಾಹಲ್ ನ ಹರದತ್ ನ್ನು ಸೋಲಿಸಿ 10000 ಜನರೊಡನೆ ಇಸ್ಲಾಂಗೆ ಸೇರಿಸಿದ ನಂತರ , ಮಥುರಾಕ್ಕೆ ಹೋಗಿ ಅಲ್ಲಿನ ದೇವಾಲಯ ನಾಶಗೊಳಿಸಿದ , ಅಂತಿಮವಾಗಿ ಕ್ರಿ.ಶ.1019 ರಲ್ಲಿ ಕನೂಜ್ ತಲುಪಿ ರಾಜ್ಯಾಪಾಲನನ್ನು ಸೋಲಿಸಿ ಅಲ್ಲಿನ ದೇವಾಲಯ ನಾಶಪಡಿಸಿದ
j. ಕಲಿಂಜರ್ ವಿರುದ್ಧ ದಂಡ ಯಾತ್ರೆ ಕ್ರಿ.ಶ.:- ಕಾರಣ ರಾಜ್ಯಪಾಲ ಘಜ್ನಿಗೆ ಶರಣಾಗಿದ್ದನ್ನು ಚಂದೇಲರು ಅರಸ ಗಂಡ ವಿರೋಧಿಸಿದ್ದ
k. ಸೋಮನಾಥ ದೇವಾಲಯಕ್ಕೆ ಮುತ್ತಿಗೆ ಕ್ರಿ.ಶ. 1024 :- ಈ ದೇವಾಲಯ ಹೊಂದಿದ್ದ ಅಪಾರ ಸಂಪತ್ತೆ ಈತನ ಧಾಳಿಗೆ ಕಾರಣ 80000 ಸೇನಾನಿಗಳೊಂದಿಗೆ ಆಕ್ರಮಣ ಕೈಗೊಂಡ ಈತನ ಧಾಳಿಯ ಮಹತ್ವ ತಳೆದಿದ್ದ ಸೋಲಂಕಿಅರಸ , ಇಮ್ಮಡಿ ಭೀಮದೇವ ಅಲ್ಲಿಂದ ಪಲಾಯನ ಮಾಡಿದ ,ಆದರೆ ್ಲ್ಲಿನ ಜನರು ಉಗ್ರವಾಗಿ ಪ್ರತಿಕ್ರಿಯಿಸಿದರು , ಈ ಪ್ರತಿಭಟನೆಯಲ್ಲಿ ಸತ್ತವರ ಸಂಖ್ಯೆ 50000 ಮೀರಿತ್ತು ಸೋಮನಾಥನ ಮೂರ್ತಿಯನ್ನು ಸ್ವತಃ ತಾನೇ ಭಗ್ನಗೋಳಿಸಿದ , ಇಲ್ಲಿ ಸಿಕ್ಕ ಮೌಲ್ಯ - 20000000 ದಿಮ್ರ್ ಹಾಮ್ಸ್ ಮೀರಿತ್ತು
l. ಗುಜರಾತಿನ ಮೇಲೆ ದಂಡಯಾತ್ರೆ ಕ್ರಿ.ಶ. 1027 :- ಇದು ಈತನ ಕೊನೆಯ ದಂಡಯಾತ್ರೆ

ಸಂಘರ್ಷದ ಪರಿಣಾಮ
ಭಾರತದ ಆರ್ಥಿಕ ದಿವಾಳಿಯಾಯಿತು
ಅಪಾರ ಕಲಾ ಸಂಪತ್ತು ನಾಶವಾಯಿತು
ಮಹಮ್ಮದ್ ಘೋರಿಯ ಸುಲಭದ ಆಕ್ರಮಣಕ್ಕೆ ದಾರಿಯಾಯಿತು
ಇಸ್ಲಾಂ ಧರ್ಮ ಭಾರತಕ್ಕೆ ಬರಲು ಸಹಕಾರಿಯಾಯಿತು
ಘಜ್ನಿ ನಗರ ಆಧುನಿಕ ನಗರವಾಗಿ ಪರಿವರ್ತಿಸಲಾಯಿತು

ಸಾಮ್ರಾಜ್ಯ ವಿಸ್ತಾರ
ಪೂರ್ವ ಪಂಜಾಬಿನಿಂದ ಪಶ್ಚಿಮದಲ್ಲಿ ಕ್ಯಾಸ್ಪಿಯನ್ ಸಮುದ್ರದವರೆಗೆ ವ್ಯಾಪಿಸಿತ್ತು
ಗುಣಗಳು
ಭಾರತದಿಂದ ಒಯ್ದ ಸಂಪತ್ತನ್ನು ಮಸೀದಿ ಕಟ್ಟಲು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಲು ಹಾಗೂ ಗ್ರಂಥಾಲಯದ ಉಪಯೋಗಕ್ಕೆ ಬಳಸಿದ
ಪರ್ಶಿಯಾದ ಹೋಮರ್ ಎಂದು ಪ್ರಸಿದ್ದಿಯಾದವನು - ಫಿರ್ ದೂಷಿ

ಈತನ ಆಸ್ಥಾನದಲ್ಲಿದ್ದವರು
ಫೀರ್ದೂಷಿ - ಆಸ್ಥಾನದ ಪಂಡಿತ
ಬೈಹರೆ , ಉಲ್ಪೆ - ಇತಿಹಾಸಕಾರರು
ಅಲ್ಬೆರೂನಿ - ಸಂಸ್ಕೃತ ವಿಧ್ವಾಂಸ ಹಾಗೂ ಗಣಿತಜ್ಞ
ಅನ್ಸಾರಿ - ಕವಿ

Extra Tips

ಘಜ್ನಿಯು - ದೇವಾಲಯಗಳ ನಾಶ ವಿಗ್ರಹಗಳನ್ನು ಒಡೆಯುವುದೇ ಧರ್ಮವೆಂದು ತಿಳಿದಿದ್ದ
ರಜಪೂತರ ಅಂತಃ ಕಲಹದ ಲಾಭ ಪಡೆದು ದಾಳಿ ನಡೆಸಿದ
ಖೋಕರ್ - ಆನಂದ ಪಾಲನ ಪರವಾಗಿ ಘಜ್ನಿಯೊಂದಿಗೆ ಹೋರಾಡಿದ ಗಡ್ಡಗಾಡು ಜನಾಂಗ
ಈತ ತನ್ನ ಹೋರಾಟ - ಧರ್ಮಯುದ್ಧ ಎಂದು ತೋರಿಸಿಕೊಂಡಿದ್ದ
ಈತ ತನ್ನನ್ನು ತಾನು - ವಿಗ್ರಹ ಭಂಜಕ (ವಿನಾಶಕ ) ಎಂದು ಕರೆದುಕೊಂಡ
ಇವನ ಕಾಲದಲ್ಲಿ ಭಾರತಕ್ಕೆ ಬಂದ ಇತಿಹಾಸಕಾರ - ಅಲ್ಬೇರೂನಿ
ಅಲ್ಬೆರೂನಿಯ ಕೃತಿ - ತಾರೀಕ್ - ಉಲ್ - ಹಿಂದ್
ಸೋಮನಾಥ ದೇವಾಲಯ - ಕಾಥೇವಾಡ ದಕ್ಷಿಣದ ತುದಿಯಲ್ಲಿದೆ
ಈತ ನಡೆಸಿದ ಕೊನೆಯ ದಂಡಯಾತ್ರೆ - ಪಂಜಾಬಿನ ಜಾಟರ ಮೇಲೆ
ಕ್ರಿ.ಶ.1030 ರಲ್ಲಿ ತನ್ನ 59 ನೇ ವಯಸ್ಸಿನಲ್ಲಿ ಘಜ್ನಿ ತೀರಿಕೊಂಡನು

ಮಹಮ್ಮದ್ ಘೋರಿ
ಈತನ ಪೂರ್ಣ ಹೆಸರು - ಮುಜಾಹಿದ್ದೀನ್ ಮಹಮ್ಮದ್ ಬಿನ್ ಸಾಮ್
ಭಾರತದ ಮೇಲೆ ದಾಳಿಯ ಉದ್ದೇಶ - ಧರ್ಮಪ್ರಾಚಾರ ಹಾಗೂ ಸಾಮ್ರಾಜ್ಯದ ಸ್ಥಾಪನೆ
ಅಧಿಕಾರಾವಧಿ - 1175 ರಿಂದ 1206
ಘೋರಿ ವಂಶದ ಸ್ಥಾಪಕ - ಸೈಫುದ್ದೀನ್ ಘೋರ್
ಈ ವಂಶದ ಪ್ರಸಿದ್ದ ದೊರೆ - ಘೀಯಾಸುದ್ಧೀನ್ ಮಹಮ್ಮದ್
ಇವನ ತಮ್ಮನೆ - ಶಹಾಬುದ್ದೀನ್
ಈ ಸಹಾಬುದ್ದೀನ್ - ಮಹಮ್ಮದ್ ಘೋರಿಯಾಗಿ ಪ್ರಸಿದ್ದಿಯಾದ
ಪ್ರಾರಂಭದಲ್ಲಿ ಈತ - ಘಜ್ನಿಯ ಗವರ್ನರ್ ನಾಗಿದ್ದ
ಭಾರತದ ಮೇಲಿನ ದ್ವೀತಿಯ ಹಂತದ - ನಾಯಕತ್ವ ವಹಿಸಿಕೊಂಡಿದ್ದ
ಭಾರತದ ಮೇಲಿನ ಪ್ರಮುಖ ಧಾಳಿ
ಅನಿಲವಾಡದ ಯುದ್ಧ
ಕ್ರಿ.ಶ.1178 ರಲ್ಲಿ ಗುಜರಾತ್ ನ ಅನಿಲವಾಡ ಕ್ಕೆ ಮುತ್ತಿಗೆ ಹಾಕಿದ ಅರಸ ಇಮ್ಮಡಿ ಭೀಮದೇವನ ಈತನ ಮೇಲೆ ಧಾಳಿ ನಡೆಸಿದಾಗ ಆತನಿಂದ ಸೋಲನುಭವಿಸಿದ
ಮೊದಲ ತರೈನ್ ಕದನ ಕ್ರಿ.ಶ.1191 :- ಕ್ರಿ.ಶ.1191 ರಲ್ಲಿ ಪೃಥ್ವಿರಾಜನ ಭಟಿಂಡಾ ಎಂಬ ಪ್ರದೇಶವನ್ನು ಆಕ್ರಮಿಸಲು ಮುಂದಾದ ಗೋವಿಂದ ರಾಜ ಚಾಕುವಿನಿಂದ ಇರಿದ , ಎರಡೂ ಸೇನೆ ಥಾಣೇಶ್ವರದ ಮೇಲೆ ಇರುವ ತರೈನ್ ಎಂಬಲ್ಲಿ ಸಂಧಿಸಿತು , ಈ ಯುದ್ಧದಲ್ಲಿ ಘೋರಿ ಗಾಯಗೊಂಡು ಸೋತು ರಣರಂಗದಿಂದ ಪಲಾಯನ ಮಾಡಿದ , ಪೃಥ್ವಿರಾಜ ಘೋರಿಯ ಸೈನ್ಯವನ್ನು 40000 ಮೈಲು ಬೆನ್ನಟ್ಟಿದ
ದ್ವೀತಿಯ ತರೈನ್ ಕದನ ಕ್ರಿ.ಶ. 1192 :- ಈ ಯುದ್ಧಕ್ಕೆ ಘೋರಿ 1,20,000 ಸೇನೆಯೊಂದಿಗೆ ಧಾಳಿನಡೆಸಿದ , ವಿಷಯ ತಿಳಿದ ಚೌಹಾಮ್ ್ರಸ ರಡಪೂತರನ್ನು ಒಟ್ಟುಗೂಡಿಸಿದ , ಫಲಕಾರಿಯಾಗದೆ ಪೃಥ್ವಿರಾಜ ಸೋಲನುಭವಿಸಿದ ಹಾಗೂ ಯುದ್ಧರಂಗದಲ್ಲಿ ಮಡಿದ , ಘೋರಿ ಪಡೆದ ರಾಜ್ಯವನ್ನು ಕುತುಬ್ - ಉದ್ - ದೀನ್ ಐಬಕ್ ನ ಅಧೀನಕ್ಕೆ ಒಳಪಡಿಸಿ ಗಜ್ನಿಗೆ ಮರಳಿದ , ನಂತರ ಐಬಕ್ ದೆಹಲಿಯನ್ನು ಸಾಮ್ರಾಜ್ಯದ ರಾಜಧಾನಿಯಾಗಿ ಮಾಡಿಕೊಂಡ
ಜಯಚಂದ್ರನ ವಿರುದ್ಧ ಧಾಳಿ ಕ್ರಿ.ಶ.1194 :- ಕನೌಜ್ ಹಾಗೂ ಬನಾರಸನ ಅರಸ ಜಯಚಂದ್ರನಾಗಿದ್ದ , ಐಬಕ್ ನ ಸಹಾಯದೊಂದಿಗೆ ಚಾಂದ್ ವಾರ್ ಎಂಬಲ್ಲಿ ಹೋರಾಡಿದ ,ಜಯಚಂದ್ರ ಹೋರಾಟದಲ್ಲಿ ಮಡಿದ , ನಂತರ ಬನಾರಸನ್ನು ವಶವಡಿಸಿಕೊಂಡ ಅಾರ ದೇವಾಲಯ ನಾಶಪಡಿಸಿ ಸಂಪತ್ತನ್ನು ಕೊಳ್ಳೆ ಹೊಡೆದ ( 1400 ಒಂಟೆಗಳ ಮೇಲೆ ಸಾಗಿಸಿದ ) , ಆ ಪ್ರದೇಶ ಜಯಚಂದ್ರನ ವಂಶಜರಿಗೆ ಹಿಂದಿರುಗಿಸಿದ
ಅನಿಲ್ ವಾರಾ ಹಾಗೂ ಕಲಿಂಜರ್ ಆಕ್ರಮಣ ಕ್ರಿ.ಶ. 1196 -97 :- ಇಮ್ಮಡಿ ಭೀಮದೇವನ ಮೇಲೆ ಪುನಃ ಎರಗಿ ಸೋಲಿಸಿದ
ಪರಮಾರ ದೇವನ ರಾಜ್ಯಕ್ಕೆ ಆಕ್ರಮಣ :- ಕ್ರಿ.ಶ. 1202 ಕಲಿಂಜರ ಮೇಲೆ ಧಾಳಿ ನಡೆಸಿ ಚಂದೇಲ ಅರಸ ಪರಮಾರ ದೇವನನ್ನು ಸೋಲಿಸಿದ ಈ ಯುದ್ಧದಲ್ಲಿ ಘೋರಿಯ ಪರವಾಗಿ ಐಬಕ್ ಹೋರಾಡಿ ಕಲಿಂಜರ್ ಮಹೋಬ ಹಾಗೂ ಖಜುರಹೋಗಳನ್ನ ಪಡೆದ 1195 - ಬಯಾನಾ ಗ್ವಾಲಿಯರ್ ವಶ , 1196 ಹಾಗೂ 1197 - ಭೀಮದೇವನನ್ನು ಸೋಲಿಸಿದ , 1202 ಬುಂದೇಲ್ ಖಂಡ ವಶಪಡಿಸಿಕೊಂಡ , 1206 ರಲ್ಲಿ ಘೋರಿಯು ಹತ್ಯೆಯಾದ
ಟರ್ಕರ ಯಶಸ್ಸಿಗೆ ಕಾರಣಗಳು

ಭಾರತೀಯರಲ್ಲಿದ್ದ ರಾಜಕೀಯ ಏಕತೆಯ ಅಭಾವ
ಸಮರ್ಥ ಮುಖಂಡತ್ವದ ಕೊರತೆ
ಊಳಿಗ ಮಾನ್ಯ ವ್ಯವಸ್ಥೆ
ಸಾಮಾಜಿಕ ಕಂದಾಚಾರ
ಧಾರ್ಮಿಕ ಅಸಮಾನತೆ
ನೈತಿಕ ಹಾಗೂ ಸಾಂಸ್ಕೃತಿಕ ಅವನತಿ
ಅಸಮರ್ಥ ಮಿಲಿಟರಿ ವ್ಯವಸ್ಥೆ

Extra Tips
ಬಾರತದಲ್ಲಿ ಪ್ರಬಲ ಮುಸ್ಲಿಂ ಸಾಮ್ರಾಜ್ಯ ಕಟ್ಟಲು ಕಾರಣನಾದ ವ್ಯಕ್ತಿ - ಮಹಮ್ಮದ್ ಘೋರಿ
ಒಂದು ಸಾಮ್ರಾಜ್ಯದ ವ್ಯಕ್ತಿ ಎಂದು ಕರೆಸಿಕೊಂಡವರು - ಮಹಮ್ಮದ್ ಘೋರಿ
ಎರಡನೇ ತರೈನ್ ಯುದ್ಧದ ಸಂಧರ್ಭದಲ್ಲಿ - ಸುಮಾರು 150 ರಜಪೂತರ ಒಕ್ಕೂಟ ರಚನೆಯಾಯಿತು
ಮಹಮ್ಮದ್ ಘೋರಿಯ ನಿಷ್ಠಾವಂತ ಗುಲಾಮ - ಐಬಕ್
ಘೋರಿಯ ಇನ್ನೋಬ್ಬ ದಂಡನಾಯಕ - ಭಕ್ತಿಯಾರ್ ಖಿಲ್ಜಿ
ಈತನ ಮುಖಾಂತರ ಬಂಗಾಳ ಹಾಗೂ ಬಿಹಾರಗಳನ್ನು ಗೆದ್ದುಕೊಂಡನು
ಗಜ್ನಿಯ ಧಾಳಿಯ 150 ವರ್ಷದ ಬಳಿಕ ಘೋರಿ ಭಾರತಕ್ಕೆ ಧಾಳಿ ಮಾಡಿದ

ಘೋರಿ ಮಹಮ್ಮದ್ ನ ಭಾರತದ ಮೇಲಿನ ಧಾಳಿ

1173 ರಲ್ಲಿ - ಪಟ್ಟಕ್ಕೆ ಬಂದನು ಪಂಜಾಬ್ ನ ಉತ್ತರಾಧಿಕಾರಿ ಎಂದು ಘೋಷಿಸಿದ
1174 – 75 - ಭಾರತದ ಮೇಲೆ ದಂಡೆತ್ತಿ ಬಂದು ಮುಲ್ತಾನ್ ಮತ್ತು ಊಚ್ ಕೋಟೆಗಳ ವಶ
1178- ಅನಿಲವಾಡದ ಭೀಮ ದೇವನಿಂದ ಸೋಲು
1181 ಪೇಷಾವರ ಆಕ್ರಮಿಸಿ ಸಿಯಾಲ್ ಕೋಟ್ ನಲ್ಲಿ ಕೋಟೆಯ ನಿರ್ಮಾಣ
1186 - ಖುಸ್ರೂ ಮಲ್ಲಿಕ್ ನಿಂದ ಲಾಹೋರ್ ನ ವಶ
1191 - ಮೊದಲ ತರೈನ್ ಯುದ್ಧದಲ್ಲಿ ಸೋಲು
1192 - ಎರಡನೇ ತರೈನ್ ಯುದ್ಧದಲ್ಲಿಲ ಗೆಲುವು
1193 ದೆಹಲಿಯ ವಶ
1194 ಜಯಚಂದ್ರನ ವಿರುದ್ಧ ಗೆಲುವು
1202 ಬುಂದೇಲ್ ಖಂಡದ ವಶ
1206 - ಘೋರಿಯ ಹತ್ಯೆ

ದೆಹಲಿಯ ಸುಲ್ತಾನರು
ಕ್ರಿ.ಶ.1206 ರಲ್ಲಿ ಘೋರಿ ಮಹಮ್ಮದ್ನು ನಿದನವಾದಾಗ ಭಾರತದ ಪ್ರದೇಶಗಳ ಅವನ ಪ್ರತಿನಿಧಿಯಾಗಿದ್ದ ಕುತ್ಬುದ್ದೀನ್ ಐಬಕ್ ನು ಸ್ವತಂತ್ರ ಸುಲ್ತಾನನೆಂದು ಘೋಷಿಸಿ ಕೊಂಡು ದೆಹಲಿಯಿಂದ ಆಡಳಿತ ನಡೆಸಿದ
ಭಾರತದಲ್ಲಿ ಸುಭದ್ರವಾಗಿ ಸ್ಥಾಪಿಸಲ್ಪಟ್ಟ ಪ್ರಧಮ ಮುಸ್ಲಿಂ ರಾಜ್ಯವೆಂದರೆ - ದೆಹಲಿಯ ಸುಲ್ತಾನರ ರಾಜ್ಯ
ಇದು ಕ್ರಿ.ಶ. 1206 ರಿಂದ 1526 ರ ಮೊದಲ ಪಾಣಿಪತ್ ಕದನದವೆರೆಗೆ ಅಸ್ತಿತ್ವದಲ್ಲಿತ್ತು

ದೆಹಲಿಯನ್ನಾಳಿದ 5 ಸಂತತಿಗಳು
ಗುಲಾಮಿ ಸಂತತಿ ( ಕ್ರಿ.ಶ. 1206 ರಿಂದ 1290 )
ಖಿಲ್ಜಿ ಸಂತತಿ ( ಕ್ರಿ.ಶ. 1290 ರಿಂದ ಕ್ರಿ.ಶ.1320 )
ತುಘಲಕ್ ಸಂತತಿ ( ಕ್ರಿ.ಶ. 1320 ರಿಂದ 1414 )
ಸಯ್ಯದ್ ಸಂತತಿ ( ಕ್ರಿ.ಶ. 1414 – 1451 )
ಲೂಧಿ ಸಂತತಿ ( ಕ್ರಿ.ಶ. 1451 – 1526 )

ಗುಲಾಮಿ ಸಂತತಿಯ ಪ್ರಮುಖ ಅರಸರು
ಕುತ್ಬುದ್ದೀನ್ ಐಬಕ್
ಇಲ್ತಮಶ್
ರಜಿಯಾ ಸುಲ್ತಾನ್
ಘೀಯಾಸುದ್ದೀನ್ ಬಲ್ಬನ್
ಕೈ ಕುಬಾದ್

ಕುತ್ಬುದ್ದೀನ್ ಐಬಕ್ ಕ್ರಿ.ಶ. 1206 ರಿಂದ 1210
ಭಾರತದಲ್ಲಿ ಅರಬ್ಬರ ಪ್ರವೇಶ - ಕ್ರಿ.ಶ. 7 ನೇ ಶತಮಾನದಲ್ಲಾಯಿತು
ಭಾರತದಲ್ಲಿ ನೆಲೆಯೂರುವ ಕನಸು ಕಂಡವರಲ್ಲಿ ಮೊದಲಿಗ - ಘೋರಿ ಮಹಮ್ಮದ್
ಈತನ ನೆಚ್ಚಿನ ದಂಡ ನಾಯಕ - ಕುತ್ಬುದ್ದೀನ್ ಐಬಕ್
ಕುತ್ಬುದ್ದೀನ್ ಐಬಕ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ. 1206
ಕುತ್ಬುದ್ದೀನ್ ಐಬಕ್ - ದೆಹಲಿ ಸುಲ್ತಾನರ ಮೊದಲ ದೊರೆ
ಭಾರತದಲ್ಲಿ ಗುಲಾಮಿ ಸಂತತಿಯ ಆಳ್ವಿಕೆ ಪ್ರಾರಂಭವಾದುದು - ಕ್ರಿ.ಶ. 1206
ಗುಲಾಮಿ ಸಂತತಿಯವರು - ಟರ್ಕೋ ಅಫಘನ್ ಮೂಲದವರು
ಟರ್ಕಿ ಭಾಷೆಯಲ್ಲಿ ಇವರನ್ನು - ಮ್ಯಾಮ್ ಲೂಕರೆಂದು ಕರೆಯಲಾಗಿದೆ
ಮ್ಯಾಮ್ ಲೂಕರು ಎಂದರೆ - ಗುಲಾಮರು
ಕ್ರಿ.ಶ. 1192 ರಿಂದ 1206 ರವರೆಗೆ ಕುತ್ಬುದ್ದೀನ್ ಐಬಕ್ ಘೋರಿಯ ದಂಡನಾಯಕನಾಗಿದ್ದ
ಮಹಮ್ಮದ್ ಘೋರಿಯು ಮೃತನಾಗಿದ್ದು - ಕ್ರಿ.ಶ. 1206 ಖೋಕರ ದಂಗೆಯಲ್ಲಿ
ಕುತ್ಬುದ್ದೀನ್ ಐಬಕ್ ಮರಣ ಹೊಂದಿದ್ದು - ಕ್ರಿ.ಶ.1210 ರಲ್ಲಿ
ಕುತ್ಬುದ್ದೀನ್ ಐಬಕ್ ನು ಮರಣ ಹೊಂದಿದ್ದು - ಪೋಲೋ ಆಟವನ್ನು ಆಡುತ್ತಿದ್ದಾಗ ಕುದುರೆಯಿಂದ ಕೆಳಕುರುಳಿ ಮರಣ ಹೊಂದಿದ
ಕುತ್ಬುದ್ದೀನ್ ಐಬಕ್ ನನ್ನು - ಲಾಹೋರಿನಲ್ಲಿ ಸಮಾಧಿ ಮಾಡಲಾಯಿತು
ಕುತ್ಬುದ್ದೀನ್ ಐಬಕ್ - ದೆಹಲಿ ಹಾಗೂ ಅಜ್ಮೀರ್ ಗಳಲ್ಲಿ ಮಸೀದಿಗಳನ್ನು ಕಟ್ಟಿಸಿದ
ಕುತ್ಬುದ್ದೀನ್ ಐಬಕ್ ಕಲಾ ಸಾಧನೆ - ವಿಶ್ವವಿಖ್ಯಾತ ಕುತುಬ್ ಮೀನಾರ್ ನ ನಿರ್ಮಾಣ
ಕುತುಬ್ ಮೀನಾರ್ - ಇದು 72.5 ಮೀಟರ್ ಎತ್ತರವಿದ್ದು ಭಾರತದಲ್ಲಿಯೇ ಅತೀ ಎತ್ತರವಾದುದು
ಕುತುಬ್ ಮೀನಾರ್ ಇಲ್ತಮಶ್ ನ ಕಾಲದಲ್ಲಿ 1230 ರಲ್ಲಿ ಪೂರ್ಣಗೊಂಡಿತು
ಈ ಮೂಲಕ 1230 ರಿಂದ ಭಾರತದಲ್ಲಿ “ ಇಂಡೋ - ಇಸ್ಲಾಂಮಿಕ್ ” ಕಲೆಯು ಪ್ರಾರಂಭವಾಯಿತು
ಇಂಡೋ - ಇಸ್ಲಾಮಿಕ್ - ಇದು ಪರ್ಶಿಯನ್ ಮತ್ತು ಭಾರತೀಯ ಕಲೆಯ ಮಿಶ್ರಣವಾಗಿದೆ
ಭಾರತದ ಮೊದಲ ಮುಸ್ಲಿಂ ದೊರೆ - ಕುತ್ಬುದ್ದೀನ್ ಐಬಕ್
ಕುತ್ಬುದ್ದೀನ್ ಐಬಕ್ ಆಸ್ಥಾನದ ವಿಧ್ವಾಂಸರು - ಹಸನ್ ನಿಜಾಮಿ , ಮತ್ತು ಫಕ್ರಿ ಮದಿರ್
ಕುತ್ಬುದ್ದೀನ್ ಐಬಕ್ ನ ಪಂಗಡ - ಈತ ಸುನ್ನಿ ಮುಸ್ಲಿಂ ಪಂಗಡಕ್ಕೆ ಸೇರಿದವನು
ಕುತ್ಬುದ್ದೀನ್ ಐಬಕ್ - ಲಾಕ್ ಬಕ್ಷ ಎಂಬ ಹೆಸರಿಗೆ ಪಾತ್ರನಾಗಿದ್ದನು
ಲಾಕ್ ಬಕ್ಷ್ ಎಂದರೇ - ಲಕ್ಷ ಹಣವನ್ನು ಧಾನ ಮಾಡುವನು ಎಂದರ್ಥ
ಕುತ್ಬುದ್ದೀನ್ ಐಬಕ್ ಬಳಿಕ ಅಧಿಕಾರಕ್ಕೆ ಬಂದವನು - ಆರಮ್ ಷಾ
ಆರಾಮ್ ಷಾ - ಲಾಹೋರಿನಲ್ಲಿ ಅಧಿಕಾರಕ್ಕೆ ಬಂದನು

Extra Tips
ಕುತ್ಬುದ್ದೀನ್ ಐಬಕ್ ನ ರಾಜಧಾನಿ - ದೆಹಲಿ
ಕುತ್ಬುದ್ದೀನ್ ಐಬಕ್ ನನ್ನು - ದೆಹಲಿ ಸಾಮ್ರಾಜ್ಯದ ಕರ್ತೃ ಎಂದು ಕರೆಯಲಾಗಿದೆ
ಕುತ್ಬುದ್ದೀನ್ ಐಬಕ್ ನು ದೆಹಲಿಯಲ್ಲಿ ನಿರ್ಮಿಸಿದ ಮಸೀದಿಯ ಹೆಸರು - ಕುವ್ವತ್ - ಉಲ್ - ಇಸ್ಲಾಂ ( ಇಸ್ಲಾಂನ ಶಕ್ತಿ )
ಐಬಕ್ ನು ಅಜ್ಮೀರದಲ್ಲಿ ನಿರ್ಮಿಸಿದ ಮಸೀದಿಯ ಹೆಸರು - - ದಾಯ್ - ದಿನ್ - ಕ - ಚೋಂಪ್ರ
ಪೋಲೋ ಆಟದ ಇನ್ನೋಂದು ಹೆಸರು - ಚೌಗನ್
ಕುತ್ಬುದ್ದೀನ್ ಐಬಕ್ ಜನಿಸಿದ ಊರು - ತುರ್ಕಿಸ್ಥಾನ
ಪ್ರಾರಂಭದಲ್ಲಿ ಕುತ್ಬುದ್ದೀನ್ ಐಬಕ್ ನು - ಖಾಜಿಯೊಬ್ಬನ ಬಳಿ ಗುಲಾಮನಾಗಿದ್ದ
ಈತನ ಸೇನಾನಿಗಳು - ಭಕ್ತಿಯಾರ್ ಖಿಲ್ಜಿ ಹಾಗೂ ಮಹಮ್ಮದ್ ಖಿಲ್ಜಿ
ದೆಹಲಿ ಸುಲ್ತಾನರ ಆಲ್ವಿಕೆ ಸುಮಾರು - 350 ವರ್ಷ ಮುಂದುವರೆಯಿತು
ಕುತ್ಬುದ್ದೀನ್ ಐಬಕ್ ನು - ಮ್ಯಾಮ್ ಲೂಕ್ ಎಂಬ ಕುಟುಂಬಕ್ಕೆ ಸೇರಿದವನು

ಅಲ್ತಮಶ್ ( ಕ್ರಿ,ಶ. 1211 – 1236 )
ಪ್ರಾರಂಭದಲ್ಲಿ ಈತ - ಕುತ್ಬುದ್ದೀನ್ ನ ಗುಲಾಮನಾಗಿದ್ದನು
ಈತ ಸಿಂಹಾಸನಕ್ಕೆ ಬಂದಿದ್ದು - ಕ್ರಿ.ಶ. 1211 ರಲ್ಲಿ
ಸುಲ್ತಾನ್ ಎಂಬ ಬಿರುದನ್ನು ತಳೆದಿದ್ದವನು - ಆಲಿಮರ್ದಿ
ರಜಪೂತರ ಪ್ರಮುಖ ಸಂಸ್ಥಾನಗಳು - ಗ್ವಾಲಿಯಾರ್ ಮತ್ತು ರಣತಂಬೋರ್

ಪ್ರಾರಂಭದ ಶತೃಗಳು
ಸಿಂಧ್ ಪ್ರಾಂತ್ಯದ - ನಾಸಿರುದ್ದೀನ್ ಕುಬಾಚ
ಘಜ್ನಿಯ - ತಾಜುದ್ದೀನ್ ಯಲ್ದೂಜ
ಬಂಗಾಳದ - ಆಲಿಮರ್ಧ
ಗ್ವಾಲಿಯರ್ ಮತ್ತು ರಣತಂಬೋರಿನ - ರಜಪೂತರು
ದೆಹಲಿಯ - ಅಮೀರರು

ಅಲ್ತಮಶ್ - ಔದ್ ವಾರಣಾಸಿ ಹಾಗೂ ಸಿವಾಲಿಕ್ ಮುಂತಾದ ಪ್ರದೇಶಗಳಲ್ಲಿ ಪ್ರಭುತ್ವವನ್ನು ಸ್ಥಾಪಿಸಿದನು
ಅಲ್ತಮಶ್ - ತರೈನ್ ಎಂಬಲ್ಲಿ ತಾಜುದ್ದೀನ್ ಯಾಲ್ದೂಜನನ್ನು ಸೋಲಿಸಿದನು
ಕುಬಾಚನನ್ನು - ಕ್ರಿ.ಶ. 1228 ರಲ್ಲಿ ಸೋಲಿಸಿ ಸೆರೆಹಿಡಿದು ಸಿಂಧೂ ನದಿಯಲ್ಲಿ ಮುಳುಗಿಸಿದನು
ಬಾಗ್ದಾದಿನ ಖಲೀಫನು - ಇವನಿಗೆ ಸುಲ್ತಾನ್ - ಇ - ಅಜಂ ಎಂಬ ಬಿರುದನ್ನು ನೀಡಿದನು
ಕ್ರಿ.ಶ. 1229 ರಲ್ಲಿ - ಈತನ ಪುತ್ರ ನಾಸಿರುದ್ದೀನನ ಮರಣದಿಂದ ತುಂಬಾ ನೊಂದುಕೊಂಡ
ಇದೇ ಕೊರಗಿನಿಂದ - ಕ್ರಿ.ಶ.1236 ರಲ್ಲಿ ಕೊನೆಯುಸಿರೆಳೆದ
ಈತ - ಇಕ್ತೆ ಎಂಬ ಎಂಬ ಸೈನ್ಯದ ಸುಧಾರಣಿಗೆ ತಂದನು
ಸೈನ್ಯದ ಸುಧಾರಣಿ ಹಾಗೂ ನಾಣ್ಯಗಳ ಚಲಾವಣಿ - ಈತನ ಆಡಳಿತ ಸಾಧನೆಯಾಗಿದೆ
ರಾಜ್ಯಗಳನ್ನು - ಇಕ್ತಗಳಾಗಿ ವಿಂಗಡಿಸಿದನ್ನು
ಇಕ್ಕಗಳ ಮೇಲ್ವಿಚಾರಣಿಗೆ - ಇಕ್ತದಾರರನ್ನು ನೇಮಿಸಿದನು
ಈತ - ಚಹಲ್ ಗಾನಿ ಅಥವಾ ಸುಪ್ರಸಿದ್ದ ನಲ್ವತ್ತರ ದಳ ಅಥವಾ Famous Fourty ಎಂಬ ದಳವನ್ನು ಸ್ಥಾಪಿಸಿದ
ಈತ ಹೊರಡಿಸಿದ ಬೆಳ್ಳಿಯ ನಾಣ್ಯದ ಹೆಸರು - ಟಂಕ ( 175 ಗೈನ್ ತೂಕ )
ಈತ ಹೊರಡಿಸಿದ ತಾಮ್ರದ ನಾಣ್ಯದ ಹೆಸರು - ಜಿತಾಲ್
ಆತನ ಆಳ್ವಿಕೆಯಲ್ಲಿ ಏಳಿಗೆ ಹೊಂದಿದ ವಿಧ್ವಾಂಸರು - ಅಮೀರ್ ಖುಸ್ರು , ಹಸನ್
ಈತ - ಕುತುಬ್ ಮೀನಾರ್ ನ ಕಾರ್ಯವನ್ನು ಪೂರ್ಣಗೊಳಿಸಿದ
ಈತನು ನಿರ್ಮಿಸಿದ ಕೋಟೆಯ ಹೆಸರು - ಅಲೈ ಕೋಟೆ
ಈತನ ನಂತರ ಅಧಿಕಾರಕ್ಕೆ ಬಂದವರು - ರುಕ್ನುದ್ದೀನ್ ಫಿರೋಜ್ ಷಾ

Extra Tips
ಅಲ್ತಮಶ್ ನ ಆಳ್ವಿಕೆಯ ಸಂಧರ್ಭದಲ್ಲಿ ದೆಹಲಿಗೆ ಧಾಳಿ ಮಾಡಿದ ಮಂಗೋಲರ ನಾಯಕ - ಚೆಂಗೀಸ್ ಖಾನ್
ಭಾರತದಲ್ಲಿ ಅರೇಬಿಕ್ ಮಾದರಿಯ ನಾಣ್ಯ ವ್ಯವಸ್ಥೆಯನ್ನು ಚಲಾವಣಿಗೆ ತಂದವನು - ಅಲ್ತಮಶ್
ಅಲ್ತಮಶ್ ನನ್ನು ವಿಧ್ವಾಂಸರು - ರೂಪಾಯಿಪೂರ್ವಜ ಎಂದು ಕರೆದಿದ್ದಾರೇ
ಈತನ ಪ್ರಧಾನ ಖಾಜಿ - ಮಿನ್ಹಾಜ್ - ಉಸ್ - ಸಿರಾಜ್
ಟರ್ಕರ ಆಡಳಿತದ ನಿಜವಾದ ಸ್ಥಾಪಕ - ಎಂದು ವಿಧ್ವಾಂಸರು ಕರೆದಿರುವುದು - ಅಲ್ತಮಶ್
ಐಬಕ್ ಆಳ್ವಿಕೆಯಲ್ಲಿ ಅಲ್ತಮಶ್ - ಗ್ವಾವಿಯಾರ್ ನ ಆಡಳಿತಗಾರನಾಗಿದ್ದ
ಅಲ್ತಮಶ್ ಸಮಕಾಲೀನ ಕವಿ - ಅಮೀರ್ ಖುಸ್ರು
ಇಜ್ಜಯಿನಿಯ ಮಹಾಕಾಳಿ ದೇವಾಲಯವನ್ನು ನಾಶಗೊಳಿಸಿದ ದೆಹಲಿ ಸುಲ್ತಾನ್ - ಅಲ್ತಮಶ್

ಅಲ್ತಮಶ್ ನ ಪ್ರಮುಖ ಧಾಳಿಗಳು
1226 - ರಣಥಂಬೋರ್
1230 - ಬಂಗಾಳ
1232 - ಗ್ವಾಲಿಯಾರ್
1234 ಮಾಳ್ವ

ಅಲ್ತಮಶ್ - ಟರ್ಕಿಯ ಇಲ್ಬೇರಿ ಪಂಗಡಕ್ಕೆ ಸೇರಿದವನು

ರಜಿಯಾ ಸುಲ್ತಾನ ( ಕ್ರಿ.ಶ. 1236 – 1240 )
ಇವಳು ಅಲ್ತಮಶ್ ನ ಮಗಳು
ಇವಳು ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ. 1236
ಇವಳು - ದೆಹಲಿಯನ್ನ ಆಳಿದ ಸುಲ್ತಾನರ ಕಾಲದಲ್ಲಿ ಆಳಿದ ಮೊದಲ ಹಾಗೂ ಏಕೈಕ ಮುಸ್ಲಿಂ ಮಹಿಳೆ
ಜಮಾಲುದ್ದೀನ್ ಯಾಕುಬ್ - ಈತ ಅಭಿಸಿನಿಯಾದ ಗುಲಾಮ
ಇವಳು - ಜಲಾಲುದ್ದೀನ್ ಯಾಕುತ್ ನನ್ನು ವಿವಾಹವಾಗಿದ್ದಳು
ಇವಳ ವಿರುದ್ಧ ದಂಗೆ ಎದ್ದವನು - ಇಕ್ತಿಯಾರುದ್ದೀನ್ ಅಲ್ತೂನಿ
ಈತ - ಸರ್ಹಿಂದ್ ನ ಪ್ರಾಂತ್ಯಾಧಿಕಾರಿ
ಅಲ್ತೂನಿಗೆ - ಬದೌನಿಗೆ ಸೆರೆ ಸಿಕ್ಕಿದಳು
ಈಕೆಯ ನಂತರ ಈಕೆಯ ಸಹೋದರ - ಬಹ್ರಾಮ್ ನು ದೆಹಲಿಯ ರಾಜನಾದ
ಬಹ್ರಾಮ್ ನ ನಂತರ ಅಧಿಕಾರಕ್ಕೆ ಬಂದವನು - ಅಲ್ಲಾವುದ್ದೀನ್ ಮಸೂದ್
ಇವನ ನಂತರ - ನಾಸಿರುದ್ದೀನ್ ಮಹಮ್ಮದ್ 1246 ರಲ್ಲಿ ಅಧಿಕಾರಕ್ಕೆ ಬಂದ
ರಜಿಯಾ ಸುಲ್ತಾನಳನ್ನು ಕೊಲೆ ಮಾಡಿದವನು - ಬಹ್ರಾಮ್ ಷಾ
ರಜಿಯಾ ಸುಲ್ತಾನ ಮರಣ ಹೊಂದಿದ್ದು - ಕ್ರಿ.ಶ. 1240 ರಲ್ಲಿ

ನಾಸಿರುದ್ದೀನ್ ಮಹಮ್ಮದ್ ( 1246 – 1266 )
ಆತ ಅಲ್ತಮಶ್ ನ - ಹಿರಿಯ ಮಗ
ಈತನ ಮುಖ್ಯ ಮಂತ್ರಿ - ಘೀಯಾಸುದ್ದೀನ್ ಬಲ್ಬನ್
ಈತ - ಕ್ರಿ.ಶ. 1266 ರಲ್ಲಿ ಮರಣ ಹೊದಿದ

ಘೀಯಾಸುದ್ದೀನ್ ಬಲ್ಬನ್ ( 1266 – 1286 )
ಈತ ಟರ್ಕಿಸ್ಥಾನದ - ಇಲ್ಬೇರಿ ಪಂಗಡಕ್ಕೆ ಸೇರಿದವನು
ಮೊದಲು ಅಲ್ತಮಶ್ ನ ಸೇವಕನಾಗಿದ್ದ
ಈತ ರಕ್ತ ಮತ್ತು ಉಕ್ಕು ನೀತಿಯನ್ನು ತಳೆದ ಸುಲ್ತಾನ
ಕ್ರಿ.ಶ. 1246 ರ್ಲಲಿ ನಾಸಿರುದ್ದೀನ್ ಮಹಮ್ಮದ್ ನ ಮಂತ್ರಿಯಾದನು
ಮಂತ್ರಿಯಾಗಿ - ಖೋಕರು ಹಾಗೂ ರಜಪೂತರನ್ನು ವಿರೋಧಿಸಿದನು
ಕ್ರಿ.ಶ. 1266 ರಲ್ಲಿ ನಾಸಿರುದ್ದೀನ್ ಮಹಮ್ಮದ್ ಷಾ ನು ಮರಣ ಹೊಂದಿದಾಗ ಸ್ವತಃ ತಾನೇ ಸಿಂಹಾಸನ ಏರಿದನು
ಬಲ್ಬನನ ಪ್ರಮುಖ ಧಾಳಿಗಳು

ಖೋಕರ ಹಾವಳಿಯನ್ನು ಅಡಗಿಸಿದುದು (ಮಂತ್ರಿಯಾಗಿ )
ದೋ ಅಬ್ ಪ್ರದೇಶದ ರಾಜರನ್ನು ಸೋಲಿಸಿದುದು
ರಾಜನಾಗಿ ನಲ್ವತ್ತರ ತಂಡದ ಧಮನ
ಗುಪ್ತಚಾರ ಪದ್ದತಿಯ ಸಂಘಟನೆ
ಸೈನ್ಯದ ಸಂಘಟನೆ
ಮಂಗೋಲರ ಧಾಳಿಯ ಧಮನ
ಬಲ್ಬನ್ನನ ರಾಜ್ಯಕ್ಕೆ ಧಾಳಿಮಾಡಿದ ಮಂಗೋಲರ ಅರಸ - ಚಂಗೀಸ್ ಖಾನ್ , ಮೊಮ್ಮಗನಾದ - ಊಲ್ಗಾಖಾನ್
ಬಲ್ಬನ್ನನು ರಾಜಕೀಯವಾಗಿ ಹತಾಶನಾಗಲು ಕಾರಣ - ಮಹಮ್ಮದ್ ನ ಸಾವು
ಬಲ್ಬನನು - ಕ್ರಿ.ಶ.1286 ರಲ್ಲಿ ಕಾಲವಾದನು

Extra Tips
ಭಾರತದ ಗಿಣಿ ಎಂದು ಕರೆಯಲ್ಪಡುವ ಪರ್ಶಿಯನ್ ಕವಿ - ಅಮೀರ್ ಖುಸ್ರು
ಬಲ್ಬನನ ಆಸ್ಥಾನದ ಕವಿಗಳು - ಅಮೀರ್ ಖುಸ್ರು ಹಾಗೂ ಅಮೀರ್ ಹಸನ್
ಬಲ್ಬನ್ನನ ನಂತರ ಅಧಿಕಾರಕ್ಕೆ ಬಂದವನು - ಮಹಮ್ಮದ್
ರಜಪೂತರಾದ ರೋಹಿಲ್ ಖಂಡದ ಹತ್ತಿಕ್ಕಿದ
ಗುಲಾಮಿ ಸಂತತಿಯ ಸುಪ್ರಸಿದ್ಧ ದೊರೆ - ಬಲ್ಬನ್
ಈತನ ನೀತಿ - ರಕ್ತ ಮತ್ತು ಉಕ್ಕಿನ ನೀತಿ
ಗುಪ್ತಚಾರ ಪದ್ಧತಿಯನ್ನು ಜಾರಿಗೆ ತಂದವನು - ಬಲ್ಬನ್
ಮಹಮ್ಮದ್ ನ ನಂತರ ಅಧಿಕಾರಕ್ಕೆ ಬಂದವನು - ಕೈಕುಬಾದ್
ಗುಲಾಮನಾಗಿದ್ದ ಈತನನ್ನು ಕೊಂಡು ದೆಹಲಿಗೆ ತಂದವನು - ಖ್ವಾಜಾ ಜಮಾಲುದ್ದೀನ್
ಇಲ್ತಮಶ್ ನ ಕಾಲದಲ್ಲಿ ಭಾರತಕ್ಕೆ ಬಂದ ಭಯಾನಕ ವ್ಯಕ್ತಿ - ಚಂಗೀಸ್ ಖಾನ್
ಸುಲ್ತಾನರ ಗಿರಿಯನ್ನು ಭದ್ರಗೊಳಿಸಿದ ಮುಸ್ಲಿಂ ನಿಜವಾದ ಸ್ಥಾಪಕ - ಇಲ್ತಮಶ್
ಅಲ್ತಮಶ್ ಗೆ ಗೌರವ ಉಡುಪನ್ನು ಕಳುಹಿಸಿದ ಖಲೀಫ - ಅಲ್ - ಮುಸ್ತಾನ್ಸಿರ ಖಿಲ್ಲಾ
ಉಜ್ಜಯಿನಿಯಿಂದ ವಿಕ್ರಮಾಧಿತ್ಯನ ಪ್ರತಿಮೆಯನ್ನು ದೆಹಲಿಗೆ ತೆಗೆದುಕೊಂಡು ಹೋದ ಗುಲಾಮರ ರಾಜ - ಅಲ್ತಮಶ್
ಕುತುಬ್ ಮಿನಾರ್ ಬಾಗ್ದಾದಿನ ಸಮೀಪ ಇದ್ದ ಖ್ವಾಜಾ ಕುತುಬುದ್ದೀನ್ ಗೌರವರ್ಥಕ್ಕೆ ರಚಿಸಲಾಗಿದೆ
ಮಲ್ಲಿಕ್ ಎಂಬ ಬಿರುದನ್ನು ಹೊಂದಿದ್ದ ಗುಲಾಮಿ ದೊರೆ - ಐಬಕ್
ಅರಸ ಭಗವಂತನ ಪ್ರತಿನಿಧಿ ಎಂದು ನಂಬಿದ್ದ ಗುಲಾಮಿ ದೊರೆ - ಬಲ್ಬನ್

ಕೈಕುಬಾದ್ ( 1287 – 1290 )
ಈತನ ತಂದೆಯ ಹೆಸರು - ಬಗ್ರಖಾನ್
ಗುಲಾಮಿ ಸಂತತಿಯ ಕೊನೆಯ ದೊರೆ - ಕೈಕುಬಾದ್
ಈತನನ್ನು ಖಿಲ್ಜಿ ಬುಡಕಟ್ಟಿನವರು ಫೀರೋಜ್ ಷಾ ನ ನೇತೃತ್ವದಲ್ಲಿ 1290 ರಲ್ಲಿ ಸಂಹರಿಸಿ - ಜಮುನಾ ನದಿಗೆ ಎಸೆದರು

ಗುಲಾಮಿ ವಂಶ ವೃಕ್ಷ
ಕುತ್ಬುದ್ದೀನ್ ಐಬಕ್ ( ಕ್ರಿ.ಶ. 1206 – 1210 ) ಸ್ಥಾಪಕ ದೊರೆ
ಆರಮ್ ಷಾ ( 1210 – 1211 ) ಐಬಕ್ ನ ಉತ್ತರಾಧಿಕಾರಿ ( ಲಾಹೋರ್ )
ಅಲ್ತಮಶ್ ( 1211 – 1236 ) ನಾಣ್ಯಗಳ ಪೂರ್ವಜ
ರಜಿಯಾ ಬೇಗಂ ( 1236 – 1240 ) ಮೊದಲ ಮಹಿಳಾ ಸುಲ್ತಾನ್
ಬಹ್ರಾಮ್ ಮತ್ತು ಮಸೂದ್ ( 1240 – 1246 ) ರಜಿಯಾಳ ಸೋದರ ಅಸಮರ್ಥ ದೊರೆ
ನಾಸಿರುದ್ದೀನ್ ಮಹಮ್ಮದ್ ( 1246 – 1266 ) ಅಲ್ತಮಶ್ ನ ಕಿರಿಯ ಮಗ
ಗಿಯಾಸುದ್ದೀನ್ ಬಲ್ಬನ್ ( 1266 – 1286 ) ಕ್ರಾಂತಿಕಾರಿ ನಿರಂಕುಶ ದೊರೆ
ಮಹಮ್ಮದ್ ( 1286 – 1287 ) ಬಲ್ಬನನ ಉತ್ತರಾಧಿಕಾರಿ
ಕೈಕುಬಾದ್ ಮತ್ತು ಶಂಶುದ್ದೀನ್ ( 1287 – 1290 ) ಕೊನೆಯ ದೊರೆಗಳು


ಇತಿಹಾಸದ ಇತರೇ ಪ್ರಶ್ನೋತ್ತರಗಳು.
ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
ತಮಿಳಿನ ಮಹಾಕಾವ್ಯಗಳು - ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
ಭಾರತದ ಪ್ರಾಚೀನ ಶಆಸನ – ಪಿಪ್ರವ ಶಾಸನ
ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
ಜೈನರ ಪವಿತ್ರ ಗ್ರಂಥಗಳು – ಅಂಗಗಳು
ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ - ನಾಗರ ಶೈಲಿ
ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ ನಂಜುಡೇಶ್ವರ
ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

46 ಕಾಮೆಂಟ್‌ಗಳು:

 1. ಪ್ರತ್ಯುತ್ತರಗಳು
  1. AL ARES HAVE super brilliant MIND BUT..................................................................................................................................................................................................................................................................................................

   ಅಳಿಸಿ
 2. friends nan question ge ans madi namma hindugalu yeke asyhey manubhavane hondidare ? mattu yavade obba person problemsana fast agi yeke sovl madalla???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

  ಪ್ರತ್ಯುತ್ತರಅಳಿಸಿ
 3. MATTU KALUHIDIDU JAGGUVA SWABHAVA YEKEIDE?

  MATTU YAVUDE OBBA UTTAMA VEKATHIYA BELAVANIGE YANNU KHANDU,,, ATANANNU ATIYAGI PARIKSHEGE OLAPADISUVUDARINDA.............
  A OBBA VEKATHIYU KUDA YALARANTE SWARTHA JEEVANAVANNU??? PRARABISIDARE!!!
  ADU NAMMA DESHADA DURDIVAVE ANTHA HELABHAHUDU..............
  NANU SWALPA NERAVGIYE YALLADANNU NET GE PUBLISHEMENT MADODU YENADARU TAPPU ANTHA IDRE PERSONALAGI KARIDU THILI HELI , YAKADRE E BHUMEEYA MELE PRATHIYODU JEEVARASHIGE ADARADE ADATHAHA NEYAMAGALU IRUTTAVE, ADARE NAVU YEKE YALLARANNU BHADUKALU BEDADE KEVALAVAGI YEKE ITARARANNU KANUTIDEVE??????????????????????????????????????????

  ಪ್ರತ್ಯುತ್ತರಅಳಿಸಿ
 4. ದೆಹಲಿಯ ಸುಲ್ತಾನರಿಂದ ಈ ದೇಶದ ಇತಿಹಾಸ ಪ್ರಾರಂಭ ಅದದ್ದು ಅಂತ ಯಾರು ಹೇಳಿದ್ದು.ಎಲ್ಲಾರ ಹಾಗೆ ಸುಳ್ಳು ಇತಿಹಾಸ ರಚನೆ ಮಾಡುದು ತುಂಬ ಸುಲಬ ಅಯ್ತ ಅಣ್ಣ...ಸತ್ಯ ಬರೇಯುದಕ್ಕೆ ತುಂಬ ಅನ್ವೇಷನೆ ಮತ್ತು ದೈರ್ಯ ಬೇಕು...ಲಕ್ಷ ಲಕ್ಷ ವರ್ಷ ನಮ್ಮ ಇತಿಹಾಸ ಇದೆ....

  ಪ್ರತ್ಯುತ್ತರಅಳಿಸಿ
 5. ಉತ್ತಮವಾಗಿ ಬರೆದಿರುತ್ತಾರೆ. ಇನ್ನು ದೆಹಲಿಯ ಸುಲ್ತಾನರ 4 ಸಂತತಿಗಳ ಬಗ್ಗೆ ವಿವರಿಸಿದರೆ ಸರಿಯಾಗಿರುತ್ತಿತ್ತು ಎಂದು ನನ್ನ ಭಾವನೆ. ಇವರಿಗೆ ತುಂಬಾ ದನ್ಯವಾದಗಳು. ಇದು ನನಗೆ ಹೆಚ್ಚಿನ ಜ್ಞಾನ ಹೊದಗಿಸಿದೆ. ದನ್ಯವಾದಗಳು

  ಪ್ರತ್ಯುತ್ತರಅಳಿಸಿ
 6. ಇದೊಂದು ಉತ್ತಮ ಪ್ರಯತ್ನ ಚಿಕ್ಕದಾದರೂ ಚೊಕ್ಕದಾಗಿದೆ.

  ಪ್ರತ್ಯುತ್ತರಅಳಿಸಿ
 7. ನಿಮ್ಮ ಪ್ರಯತ್ನ ಮುಂದುವರೆಸ ಬೇಕೆಂದು ಕೋರಿಕೊಳ್ಳುತ್ತೇನೆ ಹಾಗೂ ನಿಮ್ಮ ಈ ಪ್ರಯತ್ನ ಶ್ಲಾಘನೀಯ

  ಇಂತಿ ನಿಮ್ಮ ಸದಾಭಿಲಾಷಿ

  ಮಿಜಾಱ

  ಪ್ರತ್ಯುತ್ತರಅಳಿಸಿ
 8. ತುಂಬಾ ಚೆನ್ನಾಗಿದೆ ಸರ್. ಆದರೆ ಇನ್ನೂ ಸ್ವಲ್ಪ ಸ್ವಲ್ಪ ವಿವರಣೆ ಬೇಕಿತ್ತು ಅನಿಸ್ತಾ ಇದೆ. ಆದರೂ ಅಚ್ಚುಕಟ್ಟಾಗಿ ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಒದಗಿಸುತ್ತಿದ್ದಿದ್ದಕ್ಕೆ ತುಂಬ ತುಂಬ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 9. ಸುಳ್ಳು ಇತಿಹಾಸ .
  ಕಮಿನಿಷ್ಠರು ಬರೆದ ಇತಿಹಾಸವಿದು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಇನ್ನು ಯಾವ ರೀತಿ ಇತಿಹಾಸ ಸೃಷ್ಠಿ ಮಾಡಬೇಕಿತ್ತು ನಂದೀಶ್ ರವರೇ..... ನಿಮಗೆ ಬೇಕಾದ ಹಾಗೇ ಇತಿಹಾಸ ಸೃಷ್ಠಿ ಮಾಡಲು ಆಗುತ್ತದೆಯೇ ನೀವು ಒಮ್ಮೆ ಇತಿಹಾಸಕಾರರಾಗಿ ಹಾಗೇಯೆ ಇಂತಹ ನಿಮ್ಮ ದುರ್ಬುದ್ದಿಗೆ ಒಳ್ಳೆಯದಾಗಲಿ.... ಎಂದು ಹಾರೈಸುವೆ.

   ಅಳಿಸಿ
 10. ವಿಷಯ ಚೆನ್ನಾಗಿ ಇದೆ sir ಏನು ಹೆಚ್ಚಿನ ಮಾಹಿತಿ ನೀಡಿ

  ಪ್ರತ್ಯುತ್ತರಅಳಿಸಿ
 11. ನಾಣ್ಯಗಳ ಮೇಲೆ ಹಿಂದೂ ದೇವರುಗಳ ಮುದ್ರಣವನ್ನು ಮುಂದುರಿಸಿದ ಮುಸ್ಲಿಂ ದೊರೆ ಯಾರು?

  ಪ್ರತ್ಯುತ್ತರಅಳಿಸಿ
 12. ಸರ್... ದೆಹಲಿ ಸುಲ್ತಾನರು ಕಲೆ &ವಾಸ್ತು ಶಿಲ್ಪಕ್ಕೆ ನೀಡಿದ ಕೋಡುಗೆಗಳನ್ನ ವಿವರಿಸಿ ಸರ್...

  ಪ್ರತ್ಯುತ್ತರಅಳಿಸಿ
 13. 1) ಉತ್ತರ ಭಾರತ ಆಳಿದ ಪ್ರಮುಖ ಸಾಮ್ರಾಜ್ಯ ಗಳು ಮತ್ತು ಅವರ ಪ್ರಸಿದ ಅರಸ ಮತ್ತು ಕೊನೆಯ ಅರಸ ವಿವರಿಸಿ
  2) ದಕ್ಷಿಣ ಭಾರತ ವನು ಆಳಿದ ಪ್ರಮುಖ ಸಾಮ್ರಾಜ್ಯಗಳುನು ಮತ್ತು ಅವರ ಪ್ರಸಿದ ಅರಸರು ಮತ್ತು ಕೊನೆಯ ಅರಸರು

  ಪ್ರತ್ಯುತ್ತರಅಳಿಸಿ
 14. ಸಿರಿ ಎಂಬ ರಾಜಧಾನಿಯನ್ನು ಮಾಡಿಕೊಂಡ ದೆಹಲಿ ಸುಲ್ತಾನ ಯಾರು?

  ಪ್ರತ್ಯುತ್ತರಅಳಿಸಿ