ಗುರುವಾರ, ಮಾರ್ಚ್ 17, 2011

ಕದಂಬರು

ಕದಂಬರು
ಕರ್ನಾಟಕದಲ್ಲಿ ಮೊದಲು ಹುಟ್ಟು ಹಾಕಿದ ಕನ್ನಡ ಸಾಮ್ರಾಜ್ಯ - ಕದಂಬರು .
ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
ಕದಂಬರ ರಾಜಧಾನಿ - ಬನವಾಸಿ .
ಬನವಾಸಿ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಉತ್ತರ ಕನ್ನಡ .
ಕದಂಬರ ವಂಶದ ಸ್ಥಾಪಕ ದೊರೆ - ಮಯೂರ ವರ್ಮ .
ಕದಂಬರ ಲಾಂಛನ - ಸಿಂಹ .
ಕದಂಬರ ಧ್ವಜ - ವಾನರ .
ಮಹಾಭಾರತ ಕಾಲದಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆಯಲಾಗುತ್ತಿತ್ತು - ವೈಜಯಂತಿ ಅಥವಾ ವನವಾಸಿ .
ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ - ಬೈಜಾಂಟಿಯನ್ .
ಕದಂಬರ ಮೂಲ
A . ದೈವಾಂಶ ಸಿದ್ದಾಂತ
b. ನಾಗ ಸಿದ್ದಾಂತ
c. ಜೈನ ಸಿದ್ದಾಂತ
d.ನಂದಾ ಮೂಲ
e. ತಮಿಳು ಮೂಲ
f. ಕನ್ನಡ ಮೂಲ

ಕದಂಬರ ಮೂಲ ಪುರುಷ - ಮಯೂರ ವರ್ಮ .
ಮಯೂರವರ್ಮನ ತಂದೆಯ ಹೆಸರು - ವೀರಶರ್ಮ .
ಮಯೂರವರ್ಮನ ಗುರುವಿನ ಹೆಸರು - ವೀರಶರ್ಮ .
ಮಯೂರವರ್ಮನನ್ನ ಅವಮಾನಿಸಿದ ಕಂಚಿಯ ಪಲ್ಲವ ದೊರೆ - ಶಿವಸ್ಕಂದ ವರ್ಮ .
ಚಂದ್ರವಳ್ಳಿ ಶಾಸನದ ಕರ್ತೃ - ಮಯೂರವರ್ಮ
ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ
ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .
ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ
ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು - ಕಂಗವರ್ಮ .
ಧರ್ಮರಾಜ , ಧರ್ಮಮಹಾರಾಜ ಎಂಬ ಬಿರುದನ್ನು ಧರಿಸಿದ್ದ ಕದಂಬ ದೊರೆ - ಕಾಕುಸ್ಥವರ್ಮ .
ಕನ್ನಡದ ಮೊಟ್ಟ ಮೊದಲ ಶಾಸನ - ಹಲ್ಮಿಡಿ ಶಾಸನ .
ಹಲ್ಮಿಡಿ ಶಾಸನದ ಕರ್ತೃ - ಕಾಕುಸ್ಥವರ್ಮ .
ತಾಳಗುಂದ ಶಾಸನದ ಕರ್ತೃ - ಕಾಕುಸ್ಥವರ್ಮ .
ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು - ಪಂಚಪ್ರಧಾನರು .
ಪ್ರಧಾನ ಮಂತ್ರಿ - ಪ್ರಧಾನ
ಅರಮನೆಯ ವ್ಯವಹಾರಗಳ ಮಂತ್ರಿ - ಮನೆಸೇರ್ಗಡೆ .
ವಿದೇಶಾಂಗ ವ್ಯವಹಾರಗಳ ಮಂತ್ರಿ - ತಂತ್ರ ಪಾಲ .
ತಾಂಬೂಲ ಪಾರು ಪತ್ಯಗಾರ - ಕ್ರಮುಖ ಪಾಲ .
ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ - ಸಭಾಕಾರ್ಯ ಸಚಿವ .
ಕದಂಬರ ಆಡಳಿತದಲ್ಲಿ ಜಿಲ್ಲೆಯ ಮುಖ್ಯಸ್ಥನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಮನ್ನೇಯ .
ಪಟ್ಟಣ್ಣದ ಾಡಳಿತ ನೋಡಿಕೊಳ್ಳುತ್ತಿದ್ದವನು - ಪಟ್ಟಣ್ಣ ಸ್ವಾಮಿ .
ಕದಂಬರು ಹೊರೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರ್ಜುಂಕ .
ವ್ಯಾಪಾರ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಬಿಲ್ ಕೊಡೆ .
ಸಾರಿಗೆ ತೆರಿಗೆಯನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಕಿರುಕುಳ .
ಗೆರಿಲ್ಲಾಯುದ್ಧ ತಂತ್ರಕ್ಕೆ ಹೆಸರಾಗಿದ್ದ ದಕ್ಷಿಣ ಭಾರತದ ಮನೆತನ - ಕದಂಬರು .
ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಗೆರಿಲ್ಲಾ .
ಕದಂಬರ ಸಮಾಜದಲ್ಲಿದ್ದ ಕುಟುಂಬ ಪದ್ದತಿ - ಮಾತೃ ಪ್ರಧಾನ , ಅವಿಭಕ್ತ ಕುಟುಂಬ ಪದ್ದತಿ .
ಕದಂಬ ಸಾಮ್ರಾಜ್ಯವು ಈ ಲಕ್ಷಮಗಳನ್ನು ಹೊಂದಿತ್ತು - ಭಾರತೀಕರಣ .
ಕದಂಬರು ಈ ಧರ್ಮದ ಅವಲಂಬಿಗಳು - ವೈದಿಕ ಧರ್ಮ .
ಕದಂಬರ ಕುಲದೇವರು - ತಾಳಗುಂದದ ಪ್ರಾಣೇಶ್ವರ .
ಕದಂಬರ ಮನೆಯ ದೇವರು - ಬನವಾಸಿಯ ಮಧಕೇಶ್ವರ .
ಕದಂಬರ ಕಾಲದಲ್ಲಿ ಬನವಾಸಿಗೆ ಆಗಮಿಸಿದ ಚೀನೀಯಾತ್ರಿಕ - ಹ್ಯೂಯನ್ ತ್ಸಾಂಗ್ .
ಕದಂಬರ ಮುಖ್ಯ ವೃತ್ತಿ - ವ್ಯವಸಾಯ .
ಕದಂಬರ ಕಾಲದ ಭ ಕಂದಾಯ ಪದ್ದತಿ - ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
ಕದಂಬರ ರೇವು ಪಟ್ಟಣ್ಣಗಳು - ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
ಕದಂಬರ ವಿಶಿಷ್ಠ ಕೊಡುಗೆಗಳು - ನಾಣ್ಯ ಪದ್ದತಿ .
ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು - ಪದ್ಮಟಂಕ .
ಕದಂಬರ ಪ್ರಮುಖ ನಾಣ್ಯಗಳು - ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
ಕದಂಬರ ಕಾಲದ ಶಿಕ್ಷಣ ಪದ್ದತಿ - ಗುರುಕುಲ ಶಿಕ್ಷಮ ಪದ್ದತಿ ,
“ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು - ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ .
ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು - ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ .
ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ - ಕಂಚಿ .
ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ - ಪ್ರಾಕೃತ .
ತಾಳಗುಂದ ಶಾಸನದ ಕರ್ತೃ - ಕವಿ ಕುಬ್ಜ ( ಶಾಂತಿ ವರ್ಮ ಬರೆಯಿಸಿದ )
“ ಮದನ ತಿಲಕ ” ಕೃತಿಯ ಕರ್ತೃ - ಚಂದ್ರರಾಜ .
ಚಂದ್ರ ಚೂಡಾ ಮಣಿ ಕೃತಿಯ ಕರ್ತೃ - ನಾಗವರ್ಮ .
“ ಸುಕುಮಾರ ಚರಿತೆ ” ಯ ಕರ್ತೃ - ಶಾಂತಿನಾಥ
“ ಕೌಂತಳೇಶ್ವರ ದೌತ್ಯಂ ” ಕೃತಿಯ ಕರ್ತೃ - ಎರಡನೇ ಕಾಳಿದಾಸ .
“ ಕದಂಬ ಶೈಲಿ ” ಎಂಬ ವಾಸ್ತುಶಿಲ್ಪ ಶೈಲಿಯನ್ನು ಸೃಷ್ಠಿಸಿದವರು - ಕದಂಬರು .
ಕದಂಬರ ಆರಂಭದ ರಚನೆ - ಮೃಗೇಶ ವರ್ಮನು ರಚಿಸಿದ ಜೈನ ಬಸದಿ .
ದಕ್ಷಿಣ ಭಾರತದಲ್ಲಿಯೆ ಮೊಟ್ಟ ಮೊದಲನೆಯ ಪ್ರಾಚೀನ ದೇವಾಲಯಗಳ ಕಲಾಕೃತಿ - ತಾಳಗುಂದದ ಪ್ರಣವೇಶ್ವರ ದೇವಾಲಯ .
ಹಲ್ಮಿಡಿ ಶಾಸನ ಈ ಜಿಲ್ಲೆಯಲ್ಲಿ ದೊರೆಯುತ್ತದೆ - ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ .
ಮಯೂರ ವರ್ಮನನ್ನು “ ದ್ವೀಜೋತಮ ” ನೆಂದು ತಿಳಿಸಿರುವ ಶಾಸನದ ಹೆಸರು - ಮಳವಳ್ಳಿ ಶಾಸನ .
ಕಂಚಿಯಿಂದ ಹೊರನಡೆದ ಮಯೂರವರ್ಮನು ಮೊದಲು ಶಸ್ತ್ರಸ್ತ್ರ ಪಡೆಯನ್ನು ಕಟ್ಟಿದ ಪ್ರದೇಶ - ಶ್ರೀ ಶೈಲ
“ಧರ್ಮ ಮಹಾರಾಜಾಧಿರಾಜ ” ಎಂಬ ಬಿರದ್ದನ್ನು ಹೊಂದಿದ್ದ ಕದಂಬರ ಅರಸ - ಕಂಗವರ್ಮ ಅಥಾವ ಕೊಂಗುಣಿ ವರ್ಮ .
ತಾಳಗುಂದ ಶಾಸನ ಈ ಜಿಲ್ಲೆಯಲ್ಲಿ ದೊರಕಿದೆ - ಶಿವಮೊಗ್ಗ .
ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದ ಕದಂಬ ದೊರೆ - ಕಾಕುಸ್ಥವರ್ಮ .
ಮೃಗೇಶನ ಮತ್ತೊಂದು ರಾಜಧಾನಿ - ಹಲಸಿ .
ಕದಂಬರ ಪ್ರಾಂತ್ಯದ ಘಟಕಗಳು - ಕಂಪಣ .
ಟಂಕ ಹಾಗೂ ಗಧ್ಯಾಣ ಎಂಬ ನಾಣ್ಯಗಳನ್ನು ಚಲಾವಣಿಗೆ ತಂದ ಮೊದಲಿಗರು - ಕದಂಬರು .
ಚಂದ್ರವಳ್ಳಿಯ ಶಾಸನ ಈ ಜಿಲ್ಲೆಯಲ್ಲಿ ದೊರೆತಿದೆ - ಚಿತ್ರದುರ್ಗ .
ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ .
ಮಹಾಭಾರತದಲ್ಲಿ ಬನವಾಸಿಯನ್ನು ಈ ಹೆಸರಿನಿಂದಲೂ ಕರೆದ್ದಿದ್ದಾರೆ - ಕುಂತಲ ದೇಶ .
ಪ್ರಣವೇಶ್ವರನ ಹೆಸರಿನಲ್ಲಿ ಕೆರೆಯನ್ನ ಕಟ್ಟಿಸಿದ ದೊರೆ - ಕಾಕುಸ್ಥವರ್ಮ .
ಕದಂಬರು ಈ ನದಿಯ ದಡದಲ್ಲಿ ತಮ್ಮ ರಾಜ್ಯವನ್ನ ಸ್ಥಾಪಿಸಿದರು - ವರದಾ ನದಿ .
ತಾಳಗುಂದದ ಪ್ರಾಚೀನ ಹೆಸರು - ಸ್ಥಣ ಕುಂದೂರು
ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ - ಚಂದ್ರವಳ್ಳಿ ಶಾಸನ
ಮಯೂರವರ್ಮನು ವಿಧ್ಯಾಭ್ಯಾಸಕ್ಕಾಗಿ ಹೋದ ವಿದ್ಯಾಕೇಂದ್ರ - ಕಂಚಿ
ಕದಂಬರ ಈ ದೊರೆಯನ್ನು ಕುಂತಳ ರಾಜ್ಯದ ಏಕಮಾತ್ರ ದೊರೆ ಎಂದು ಹೇಳಲಾಗಿದೆ - ಭಗೀರಥ ವರ್ಮ
ಗುಪ್ತರೊಂದಿಗೆ ವೈವೈಹಿಕ ಸಂಬಂಧ ಹೊಂದಿದ್ದ ಕದಂಬ ದೊರೆ - ಕಾಕುಸ್ಥ ವರ್ಮ
ಕದಂಬರ ಕೊನೆಯ ದೊರೆ - ಹರಿವರ್ಮ -
ಕದಂಬರ ಆಳ್ವಿಕೆಯನ್ನು ಕೊನೆಗಾಣಿಸಿದ ಸಾಮ್ರಾಜ್ಯ - ಬಾದಾಮಿ ಚಾಲುಕ್ಯರು
ತಾಳಗುಂದ ಶಾಸನವು ಈ ಅರಸರನ್ನು “ ಆಬರಣ ” ಎಂದು ಬಣ್ಣಿಸಿದೆ - ಕಾಕುಸ್ಥ ವರ್ಮ
ಹಲ್ಮಿಡಿ ಶಾಸನದ ಕಾಲ - ಕ್ರ.ಶ.450

17 ಕಾಮೆಂಟ್‌ಗಳು:

  1. ನಾನು ಒಬ್ಬ ಪತ್ರಿಕೆಯ ಹವ್ಯಾಸಿ ವರದಿಗಾರ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ಇತಿಹಾಸದ ಬಗ್ಗೆ ಆಸಕ್ತಿ ಇದೆ

    ಪ್ರತ್ಯುತ್ತರಅಳಿಸಿ
  2. ಇತಿಹಾಸ ತಿಳಿಯಬಯಸುವವರಿಗೆ ವರವಾಗಿದೆ ಮತ್ತು ನಮ್ಮ ಕನ್ನಡ ನಾಡಿನ ರಾಜರ ಮತ್ತು ರಾಜಮನೆತನಗಳ ಬಗ್ಗೆ ಹೆಮ್ಮೆ ಮೂಡಿಸುತ್ತದೆ

    ಪ್ರತ್ಯುತ್ತರಅಳಿಸಿ
  3. Hi. good time. Sweet ಇತಿಹಾಸ ವಿಷಯದ ಬಗ್ಗೆ ಉಪನ್ಯಾಸದಿಂದ ತಿಳಿದುಕೊಂಡಷ್ಟು ಪ್ರತಿಬಿಂಬಿಸಿದೆ ನನಗೆ!

    ಪ್ರತ್ಯುತ್ತರಅಳಿಸಿ
  4. ಹಲ್ಮಿಡಿ ಶಾಸನವನ್ನು ಮೊದಲು ಪತ್ತೆ ಮಾಡಿದವರು ಗೊತ್ತಿದ್ದರೆ ತಿಳಿಸಿ

    ಪ್ರತ್ಯುತ್ತರಅಳಿಸಿ
  5. ಹಲ್ಮಿಡಿ ಶಾಸನವನ್ನು ಮೊದಲು ಪತ್ತೆ ಮಾಡಿದವರು ಗೊತ್ತಿದ್ದರೆ ತಿಳಿಸಿ

    ಪ್ರತ್ಯುತ್ತರಅಳಿಸಿ
  6. ಬಿಂದುಸೇನ ಮಯೂರ ವರ್ಮನ ತಂದೆ ಆಗರಬಹುದು. ವೀರಶರ್ಮ ಅವನ ಅಜ್ಜ ಎಂದು ಓದಿರುವೆ.

    ಪ್ರತ್ಯುತ್ತರಅಳಿಸಿ
  7. ಈ ರೀತಿಯ ಒಂದು ಪ್ರಶ್ನೋತ್ತರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

    ಪ್ರತ್ಯುತ್ತರಅಳಿಸಿ
  8. ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಗೂಗಲ್ ನಲ್ಲಿ ಸಿಗುತ್ತದೆ ಅದನ್ನು ಸೇರಿಸುವ ನಿಮಗೂ ಆತ್ಮೀಯ ಧನ್ಯವಾದಗಳು ಇನ್ನು ಮುಂದೆ ಈಗೆ ಮಾಹಿತಿ ನೀಡ್ತಾ ಹಿರಿ 🙏🙏🙏

    ಪ್ರತ್ಯುತ್ತರಅಳಿಸಿ